ಸಮಾಜ ಸೇವಕ ಅಬ್ದುಲ್ ಅಝೀಝ್ ಪವಿತ್ರ ಅವರಿಗೆ ‘ನವ ಕರ್ನಾಟಕ ರತ್ನ’ ಪ್ರಶಸ್ತಿ
ಮಂಗಳೂರು: ಬೆಂಗಳೂರಿನಲ್ಲಿ ನಡೆದ ಅನಿವಾಸಿ ಕನ್ನಡಿಗರ ಸಮ್ಮೇಳನದಲ್ಲಿ ಸಮಾಜ ಸೇವಕ ಅಬ್ದುಲ್ ಅಝೀಝ್ ಪವಿತ್ರ ಅವರಿಗೆ ‘ನವ ಕರ್ನಾಟಕ ರತ್ನ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ಸಂಘಟನಾ ಕ್ಷೇತ್ರದಲ್ಲಿ ಸಲ್ಲಿಸಿರುವ ಅನುಪಮ ಸೇವೆ, ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಮೂಲತಃ ದ.ಕ ಜಿಲ್ಲೆಯ ಕಲ್ಲಡ್ಕ ನಿವಾಸಿಯಾಗಿರುವ ಅಬ್ದುಲ್ ಅಝೀಝ್ ಪವಿತ್ರ ಅವರು ಸೌದಿ ಅರೇಬಿಯಾದಲ್ಲಿ ಉದ್ಯಮದಲ್ಲಿದ್ದು ಕನ್ನಡ ಪರ ಸಂಘಟಕರಾಗಿದ್ದಾರೆ. ಅಲ್ಲದೇ ಅನಿವಾಸಿ ಕನ್ನಡಿಗರ ಪರವಾಗಿ ಹೋರಾಟ ನಡೆಸುತ್ತಾ ಅನಿವಾಸಿಗಳಿಗೆ ಆಗುತ್ತಿರುವ ಸಮಸ್ಯೆಗಳಿಗೆ ಧ್ವನಿ ಎತ್ತುತ್ತಿದ್ದಾರೆ. ಸರಕಾರದ ಮಟ್ಟದಲ್ಲೂ ಅನಿವಾಸಿಗಳ ಪರವಾದ ವಿಚಾರದಲ್ಲಿ ಇವರು ಮುಂಚೂಣಿಯಲ್ಲಿ ನಿಂತು ಕಾರ್ಯ ನಿರ್ವಹಿಸುತ್ತಿದ್ದಾರೆ.