ಕ್ರೀಡೆವಿಜ್ಞಾನ

ಹೊರಗಿನ ಶಕ್ತಿಗಳು ತಂಡದಲ್ಲಿ ಒಡಕುಂಟು ಮಾಡಲು ಪ್ರಯತ್ನಿಸುತ್ತಿವೆ-ರೊನಾಲ್ಡೊ

ಪೋರ್ಚುಗಲ್‌ ತಂಡದಲ್ಲಿ ಒಗ್ಗಟ್ಟು ಇದೆ. ಹೊರಗಿನ ಶಕ್ತಿಗಳು ತಂಡದಲ್ಲಿ ಒಡಕು ಉಂಟುಮಾಡಲು ಪ್ರಯತ್ನಿಸುತ್ತಿವೆ ಎಂದು ಸ್ಟಾರ್‌ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಬೇಸರ ವ್ಯಕ್ತಪಡಿಸಿದ್ದಾರೆ.

ಸ್ವಿಟ್ಜರ್ಲೆಂಡ್‌ ವಿರುದ್ದದ ಪ್ರೀ ಕ್ವಾರ್ಟರ್‌ ಫೈನಲ್ ಪಂದ್ಯದಲ್ಲಿ ರೊನಾಲ್ಡೊ ಅವರನ್ನು ಪಂದ್ಯಾಟದಿಂದ ಹೊರಗಿಡಲಾಗಿತ್ತು. ಕೋಚ್‌ ಫೆರ್ನಾಂಡೊ ಸಂಟೋಸ್‌ ಜೊತೆ ವಾಗ್ವಾದ ನಡೆಸಿ ವಿಶ್ವಕಪ್‌ ಟೂರ್ನಿಯನ್ನು ಅರ್ಧದಲ್ಲೇ ಮೊಟಕುಗೊಳಿಸಿ ತವರಿಗೆ ಮರಳುವುದಾಗಿ ಅವರು ಬೆದರಿಕೆಯೊಡ್ಡಿದ್ದಾರೆ ಎಂದು ಪೋರ್ಚುಗಲ್‌ನ ಮಾಧ್ಯಮಗಳು ವರದಿ ಮಾಡಿದ್ದವು.

ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ರೊನಾಲ್ಡೊ, ‘ತಂಡದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಇದ್ದೇವೆ’ ಎಂದಿದ್ದಾರೆ.

ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ರೊನಾಲ್ಡೊ ಬದಲು ಕಣಕ್ಕಿಳಿದಿದ್ದ ಗೊನ್ಸಾಲೊ ರಾಮೋಸ್‌ ಅವರು ಹ್ಯಾಟ್ರಿಕ್‌ ಗೋಲು ಗಳಿಸಿ ಮಿಂಚಿದ್ದರು.

Leave a Reply

Your email address will not be published. Required fields are marked *

error: Content is protected !!