ಐಪಿಎಲ್ ಇತಿಹಾಸದಲ್ಲಿ ಅತೀ ಹೆಚ್ಚು ಮೊತ್ತಕ್ಕೆ ಹರಾಜಾದ ಶ್ರೇಯಸ್ ಅಯ್ಯರ್
ಸೌದಿ ಅರೇಬಿಯಾದ ಜಿದ್ದಾದಲ್ಲಿ ನಡೆಯುತ್ತಿರುವ ಐಪಿಎಲ್ ಮೆಗಾ ಹರಾಜಿನಲ್ಲಿ ಭಾರತದ ಬ್ಯಾಟ್ಸ್ ಮೆನ್, ಕಳೆದ ಬಾರಿಯ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕರಾಗಿದ್ದ ಶ್ರೇಯಸ್ ಅಯ್ಯರ್ ಅವರು 26.75 ಕೋಟಿ ರೂ.ಗೆ ಪಂಜಾಬ್ ಪಾಲಾಗಿದ್ದಾರೆ.
![](https://newsbites.in/wp-content/uploads/2024/11/img_20241124_1634192113578108152159396.jpg)
26.75 ಕೋಟಿ ರೂ. ಪಡೆಯುವ ಮೂಲಕ ಮಿಚೆಲ್ ಸ್ಟಾರ್ಕ್ ಹೆಸರಿನಲ್ಲಿದ್ದ ಅತೀ ಹೆಚ್ಚು ಬೆಲೆಗೆ ಐಪಿಎಲ್ ನಲ್ಲಿ ಹರಾಜಾದ ಆಟಗಾರ ಎಂಬ ದಾಖಲೆಯನ್ನು ತಮ್ಮ ಹೆಸರಿಗೆ ಶ್ರೇಯಸ್ ಅಯ್ಯರ್ ಬರೆದುಕೊಂಡರು.