ನಾನು ಹೇಗೆ ಬದುಕುಳಿದೆನೋ ಗೊತ್ತಿಲ್ಲ!! ವಿಮಾನ ದುರಂತದಲ್ಲಿ ಬದುಕುಳಿದ ಏಕೈಕ ವ್ಯಕ್ತಿ ಹೇಳಿದ್ದೇನು?
ಅಹಮದಾಬಾದ್: ಏರ್ ಇಂಡಿಯಾ ವಿಮಾನ ದುರಂತದಲ್ಲಿ 40 ವರ್ಷದ ಬ್ರಿಟಿಷ್ ಪ್ರಜೆ ರಮೇಶ್ ವಿಶ್ವಾಸ್ ಕುಮಾರ್ ಅವರು ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ.

ಅಹಮದಾಬಾದ್‌ನ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ಮಾಧ್ಯಮಗಳೊಂದಿಗೆ ಘಟನೆಯಿಂದ ಪಾರಾದ ಬಗ್ಗೆ ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.
ನನ್ನ ಕಣ್ಣ ಮುಂದೆಯೇ ಎಲ್ಲಾ ನಡೆದು ಹೋಯಿತು. ನಾನು ಹೇಗೆ ಬದುಕುಳಿದೆನೋ ಗೊತ್ತಿಲ್ಲ. ನನಗೆ ನಂಬಲು ಆಗ್ತಿಲ್ಲ. ಅಲ್ಲಿ ಕೆಲ ಕ್ಷಣ ನಾನು ಸತ್ತೇ ಹೋಗಿದ್ದೇನೆ ಎಂದು ಅನ್ನಿಸಿತ್ತು. ಆದರೆ ಕಣ್ಣು ಬಿಟ್ಟಾಗ ನಾನು ಬದುಕಿದ್ದೇನೆ ಎಂದು ಗೊತ್ತಾಯ್ತು ಎಂದು ಕರಾಳ ಕ್ಷಣವನ್ನು ಮೆಲುಕು ಹಾಕಿದ್ದಾರೆ.
ವಿಮಾನ ಟೇಕಾಫ್ ಆಗ್ತಿದ್ದಂತೆ ಏನೋ ಸಮಸ್ಯೆ ಆಗಿದೆ ಎಂದು ಗೊತ್ತಾಯ್ತು. 5ರಿಂದ 10 ಸೆಕೆಂಡ್ ವಿಮಾನ ಸ್ಟ್ರಕ್ ಆದಂತೆ ಅನ್ನಿಸಿತು. ವಿಮಾನದ ಒಳಗೆ ಹಸಿರು, ಬಿಳಿ ಬಣ್ಣದ ಲೈಟ್ ಆನ್ ಆಯ್ತು. ಕೆಲವೇ ಸೆಕೆಂಡ್‌ನಲ್ಲಿ ವಿಮಾನ ಕಟ್ಟಡಕ್ಕೆ ಡಿಕ್ಕಿಯಾಯ್ತು ಎಂದು ಅವರು ಹೇಳಿರುವುದಾಗಿ ವರದಿಯಾಗಿದೆ.