ಗಾಳಿಮುಖದಲ್ಲಿ ಕಾಂಗ್ರೆಸ್ ವಿಜಯೋತ್ಸವ
ಪುತ್ತೂರು: ಚನ್ನಪಟ್ಟಣ, ಶಿಗ್ಗಾಂವಿ ಹಾಗೂ ಸಂಡೂರು ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನ.23ರಂದು ಈಶ್ವರಮಂಗಲದಲ್ಲಿ ಪಟಾಕಿ ಸಿಡಿಸಿ, ಜೈಕಾರ ಹಾಕಿ ವಿಜಯೋತ್ಸವ ಆಚರಿಸಿದರು.
ನೆಟ್ಟಣಿಗೆ ಮುಡ್ನೂರು ಗ್ರಾ.ಪಂ ಸದಸ್ಯ ಶ್ರೀರಾಮ್ ಪಕ್ಕಳ, ನೆ. ಮುಡ್ನೂರು ವಲಯ ಕಾಂಗ್ರೆಸ್ ಅಧ್ಯಕ್ಷ ಮೂಸಾನ್ ಹಾಜಿ, ಗಾಳಿಮುಖ ವಾರ್ಡ್ ಅಧ್ಯಕ್ಷ ಯೂಸುಫ್ ಹಾಜಿ ತೋಟ, ಪ್ರಮುಖರಾದ ಸೂಫಿ ಬಂಟಡ್ಕ, ಅಬ್ದುಲ್ಲ, ವಿಜಯಾ ಕರ್ನೂರುಗುತ್ತು, ಎ.ಬಿ ಅಬ್ಬಾಸ್ ಕರ್ನೂರು, ಮುನೀರ್, ಶಿಯಾಬ್, ಅಬ್ಬಾಸ್ ಕೊಟ್ಯಾಡಿ, ಮಹಮ್ಮದ್ ಬೆದ್ರಾಡಿ, ಬಶೀರ್ ಕರ್ನೂರು, ಯೂಸುಫ್ ಹಾಜಿ ಚೀಚಗದ್ದೆ ಮತ್ತಿತರರು ಉಪಸ್ಥಿರಿದ್ದರು.