ಅಮ್ಚಿನಡ್ಕ: ಕಾಡಾನೆ ಪ್ರತ್ಯಕ್ಷ
ಪುತ್ತೂರು: ತೋಟಗಳಿಗೆ ಕಾಡಾನೆಗಳು ದಾಳಿ ನಡೆಸಿ ಕೃಷಿ ಹಾನಿ ಮಾಡಿರುವ ಘಟನೆ ಸೆ.26ರಂದು ಅಮ್ಚಿನಡ್ಕದ ಮುಖಾರಿಮೂಲೆ ಎಂಬಲ್ಲಿ ನಡೆದಿದೆ.
ಆನೆಗುಂಡಿ ರಕ್ಷಿತಾರಣ್ಯ ಮೂಲಕ ಅಮ್ಚಿನಡ್ಕದ ಮುಖಾರಿಮೂಲೆಗೆ ಬಂದ ಮೂರು ಕಾಡಾನೆಗಳು ಸ್ಥಳೀಯ ನಿವಾಸಿ ಅಬ್ದುಲ್ ರಝಾಕ್ ಮತ್ತು ಶರತ್ ಕುಮಾರ್ ಎಂಬವರ ತೋಟಕ್ಕೆ ನುಗ್ಗಿ ಕೃಷಿಗೆ ಹಾನಿ ಮಾಡಿದೆ ಎಂದು ತಿಳಿದು ಬಂದಿದೆ.
ಆನೆ ದಾಳಿಯಿಂದ ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿದೆ. ಅರಣ್ಯ ಇಲಾಖಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.