ಯುದ್ಧ ಮುಂದುವರಿದರೆ ಭಾರತದ ಆರ್ಥಿಕತೆಗೆ ಹೊಡೆತ, ತೈಲ ಬೆಲೆ ಏರಿಕೆ!?
ಇಸ್ರೇಲ್ ಮತ್ತು ಅಮೆರಿಕ ಇರಾನ್ ಮೇಲೆ ದಾಳಿ ನಡೆಸಿದ ಪರಿಣಾಮ ಯುದ್ಧ ಆರಂಭಗೊಂಡಿದ್ದು ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಆತಂಕದ ವಾತಾವರಣ ಸೃಷ್ಟಿ ಆಗಿದೆ. ಇದು ಮುಂದುವರಿದರೆ ಭಾರತ ಸೇರಿದಂತೆ ವಿಶ್ವದ ಇತರ ರಾಷ್ಟ್ರಗಳ ಮೇಲೆ ಭಾರೀ ಹೊಡೆತ ಬೀಳಲಿದೆ. ಅದರಲ್ಲೂ ಭಾರತದ ಆರ್ಥಿಕತೆಗೆ ದೊಡ್ಡ ಹೊಡೆತ ಬೀಳಲಿದೆ. ಬೆಲೆ ಏರಿಕೆ ಬಿಸಿ ಭಾರತಕ್ಕೆ ತಟ್ಟಲಿದೆ ಎಂದು ವರದಿಯಾಗಿದೆ.

ಯುದ್ಧದ ಸಂಘರ್ಷ ಮುಂದುವರೆದ್ರೆ ತೈಲ ಬೆಲೆ ಹೆಚ್ಚಳವಾಗಲಿದ್ದು ಯುಎಇ, ಸೌದಿ, ಬಹ್ರೇನ್ ನಿಂದ ಪೆಟ್ರೋಲ್ ಸರಬರಾಜಿನಲ್ಲಿ ವ್ಯತ್ಯಯ ಆಗಲಿದೆ.
ಪೆಟ್ರೋಲ್ ಬೆಲೆ ಜಾಸ್ತಿ ಆದರೆ ಕಚ್ಚಾ ವಸ್ತುಗಳ ಬೆಲೆ ಕೂಡಾ ಹೆಚ್ಚಳ ಆಗುವ ಆತಂಕ ಇದೆ. ಡಾಲರ್ ಬೆಲೆ ಗಗನಕ್ಕೇರುವ ಸಾಧ್ಯತೆಯಿದ್ದು ಯುದ್ಧ ಮುಂದುವರೆದರೆ ದೇಶದ ಆರ್ಥಿಕತೆ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರಲಿದೆ ಎಂದು ವಿಶ್ಲೇಷಿಸಲಾಗಿದೆ.





