ಮಾಣಿ: ಟೆಲಿಫೋನ್ ಎಕ್ಸ್’ಚೇಂಜ್ ನಿಂದ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಕಳವು
ವಿಟ್ಲ: ಮಾಣಿ ಮುಖ್ಯ ಪೇಟೆಯ, ಬಿಎಸ್‌ಎನ್‌ಎಲ್ ಟವರ್ ನ ಎಕ್ಸ್ ಚೇಂಜ್ ಒಳಗೆ ಇದ್ದ 600 ಎಎಚ್ ಎಕ್ಸೈಡ್ 24 ಟವರ್ ಬ್ಯಾಟರಿಗಳು (ಇದರ ಅಂದಾಜು ಮೌಲ್ಯ2,12,740/- ರೂ),ಮತ್ತು ಎಂಡಿಎಫ್ ರೂಮಿನ ತಾಮ್ರದ ಕೇಬಲ್ ಲ್ಯಾಂಡ್ಲೈನ್ ಪೋನಿನ ಎಲೆಕ್ಟ್ರಾನಿಕ್ ಕಾರ್ಡ್ ಗಳು( ಇದರ ಅಂದಾಜು ಮೌಲ್ಯ 15000/- ರೂ) ಮತ್ತು ಸ್ಟೆಬಿಲೈಸರ್ 02 ( ಇದರ ಅಂದಾಜು ಮೌಲ್ಯ 2000/- ರೂ) ಮತ್ತು ಡಿಬಿ ಪ್ಯಾನೆಲ್ ಬೋರ್ಡ್ 1 (ಇದರ ಅಂದಾಜು ಮೌಲ್ಯ 500/- ರೂ) ಹಾಗೂ ಇತರ ಬಿಡಿ ಭಾಗಗಳನ್ನು ಕಳ್ಳತನಗೈಯಲಾಗಿದೆ.
ಕಳವಾದ ವಸ್ತುಗಳು ಅಂದಾಜು ಮೊತ್ತ 2,30,240/- ಲಕ್ಷ ರೂ ಆಗಿರುತ್ತದೆ ಎಂಬುದಾಗಿ ಮಾಣಿ ಗ್ರಾಮದ ಬಿಎಸ್ಸೆನ್ನೆಲ್ ಟವರ್ ನ ಟೆಕ್ನಿಷಿಯನ್ ಯಾದವ ಶೆಟ್ಟಿ (38) ಅವರ ದೂರಿನ ಮೇರೆಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.