ಕ್ರೈಂಜಿಲ್ಲೆ

ಅಂಗನವಾಡಿ ಸಹಾಯಕಿಯ ಮೂಗು ಕತ್ತರಿಸಿದ ಮನೆ ಮಾಲೀಕಅಂಗನವಾಡಿ ಮಕ್ಕಳು ಅಂಗನವಾಡಿ ಪಕ್ಕದಲ್ಲಿದ್ದ ಮನೆಯ ಅಂಗಳಕ್ಕೆ ತೆರಳಿ ಹೂ ಕಿತ್ತ ಕಾರಣಕ್ಕೆ ಮನೆ ಮಾಲಕ ಅಂಗನವಾಡಿ ಸಹಾಯಕಿಯ ಮೂಗನ್ನು ಕತ್ತರಿಸಿದ ಆಘಾತಕಾರಿ ಘಟನೆ ಬೆಳಗಾವಿ ತಾಲೂಕಿನ ಬಸುರ್ಗೆ ಗ್ರಾಮದಲ್ಲಿ ವರದಿಯಾಗಿದೆ.

ಅಂಗನವಾಡಿ ಸಹಾಯಕಿ ಸುಗಂಧಾ (50. ವ) ಕುಡಗೋಲಿನಿಂದ ಹಲ್ಲೆಗೆ ಒಳಗಾದವರು. ಇದೇ ಗ್ರಾಮದ ಕಲ್ಯಾಣಿ ಎಂಬಾತ ಆರೋಪಿ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.

ಅಂಗನವಾಡಿ ಮಕ್ಕಳು ಆಟವಾಡುತ್ತಾ ಪಕ್ಕದ ಮನೆಯ ಆವರಣಕ್ಕೆ ತೆರಳಿ ಅಲ್ಲಿ ಹೂಗಳನ್ನು ಕಿತ್ತಿದ್ದಾರೆ. ಇದರಿಂದ ಆಕ್ರೋಶಗೊಂಡ ಮನೆಯ ಮಾಲಕ ಕಲ್ಯಾಣಿ ಮೋರೆ ಮಕ್ಕಳನ್ನು ಗದರಿಸಿ ಹೊಡೆಯಲು ಮುಂದಾಗಿದ್ದಾನೆ. ಈ ವೇಳೆ ಮಧ್ಯೆ ಪ್ರವೇಶಿಸಿದ ಅಂಗವಾಡಿ ಸಹಾಯಕಿ ಸುಗಂಧಾ ಮಕ್ಕಳನ್ನು ಹೊಡೆಯದಂತೆ ಆತನನ್ನು ತಡೆದಿದ್ದಾರೆ. ಈ ವೇಳೆ ಕೋಪಗೊಂಡ ಆರೋಪಿ ಕಲ್ಯಾಣಿ ಕುಡಗೋಲು ತೆಗೆದುಕೊಂಡು ಬಂದು ಏಕಾಏಕಿ ಸುಗಂಧಾ ಮೇಲೆ ಹಲ್ಲೆ ನಡೆಸಿ ಅವರ ಮೂಗು ಕತ್ತರಿಸಿದ್ದಾನೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಲಾಗಿದೆ.ಗಾಯಾಳು ಸುಗಂಧಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!