ನಾನು ಪಕ್ಷದ ಅಂತಿಮ ಧ್ವನಿ ಎಂದು ನಾನು ಭಾವಿಸುವುದಿಲ್ಲ: ಕಂಗನಾ
ದೆಹಲಿ: ರೈತರ ಪ್ರತಿಭಟನೆಯ ಕುರಿತು ಬಿಜೆಪಿ ಸಂಸದೆ, ಚಿತ್ರನಟಿ ಕಂಗನಾ ರಣಾವತ್ ಅವರು ವಿವಾದಾತ್ಮಕ ಹೇಳಿಕೆಗಳ ಬಗ್ಗೆ ಬಿಜೆಪಿ ಛೀಮಾರಿ ಹಾಕಿದ ಬಳಿಕ ಪ್ರತಿಕ್ರಿಯೆ ನೀಡಿದ್ದಾರೆ.

ಪಕ್ಷದ ನಾಯಕತ್ವದಿಂದ ನನಗೆ ಛೀಮಾರಿ ಹಾಕಲಾಯಿತು. ಅದು ನನಗೆ ಒಳ್ಳೆಯದು. ನಾನು ಪಕ್ಷದ ಅಂತಿಮ ಧ್ವನಿ ಎಂದು ನಾನು ಭಾವಿಸುವುದಿಲ್ಲ. ಅದನ್ನು ನಂಬಲು ನಾನೇನು ಮೂರ್ಖಳಲ್ಲ ಎಂದು ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಕಂಗನಾ ಹೇಳಿದ್ದಾರೆ.
ನನ್ನ ಮಾತಿನಲ್ಲಿ ಹೆಚ್ಚು ಜಾಗರೂಕರಾಗಿರಲು ಮತ್ತು ಪಕ್ಷದ ನೀತಿಗಳಿಗೆ ಹೊಂದಿಕೆಯಾಗಲು ನಾನು ನೋಡುತ್ತಿದ್ದೇನೆ. ಏಕೆಂದರೆ ಬಿಜೆಪಿಗೆ ಹಮ್ ರಹೇ ಯಾ ನಾ ರಹೇ, ಭಾರತ್ ರೆಹನಾ ಚಾಹಿಯೇ (ನಾವು ಇದ್ದರೂ ಇಲ್ಲದಿದ್ದರೂ ಭಾರತ ಉಳಿಯಬೇಕು)” ಎಂದು ಕಂಗನಾ ಹೇಳಿದ್ದಾರೆ.