ಲಾಕ್ ಡೌನ್ ಬಳಿಕ ಸ್ಥಗಿತಗೊಂಡಿದ್ದ ಅಳಿಕೆ ಬಸ್ ಸಂಚಾರ ಶಾಸಕರ ಸೂಚನೆ ಬಳಿಕ ಪುನರಾರಂಭ
ಪುತ್ತೂರು: ಕಳೆದ ಕೊರೊನಾ ಲಾಕ್‌ಡೌನ್ ಬಳಿಕ ನಿಂತು ಹೋಗಿದ್ದ ಪುತ್ತೂರು-ಅಳಿಕೆ ಕೆಎಸ್‌ಆರ್‌ಟಿಸಿ ಬಸ್ ಸಂಚಾರವನ್ನು ಪುತ್ತೂರು ಶಾಸಕರಾದ ಅಶೋಕ್ ರೈ ಅವರು ಪುನರಾರಂಭಿಸುವಂತೆ ಸೂಚನೆ ನೀಡಿದ್ದು ಬಸ್ ಸೇವೆ ಆರಂಭಗೊಂಡಿದೆ.
ಬಸ್ ವ್ಯವಸ್ಥೆ ಇಲ್ಲದೆ ಅಳಿಕೆ ಗ್ರಾಮಸ್ಥರು ತೀವ್ರ ತೊಂದರೆಯನ್ನು ಅನುಭವಿಸುತ್ತಿದ್ದರು. ಕಳೆದ ವಾರದ ಹಿಂದೆ ಅಳಿಕೆ ಗ್ರಾಮಸ್ಥರು ಶಾಸಕ ಅಶೋಕ್ ರೈ ಬಳಿ ಬಂದು ಮನವಿ ಮಾಡಿ ಬಸ್ ಸಂಚಾರ ಇಲ್ಲದೆ ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ತಿಳಿಸಿದ್ದರು. ತಕ್ಷಣವೇ ಕೆಎಸ್‌ಆರ್‌ಟಿಸಿ ಅಧಿಕಾರಿಗೆ ಕರೆ ಮಾಡಿ ವಾರದೊಳಗೆ ಬಸ್ ವ್ಯವಸ್ಥೆ ಪುನರಾರಂಭಿಸುವಂತೆ ಸೂಚನೆಯನ್ನು ನೀಡಿದ್ದರು.
ಬಸ್ ಸಮಯ: ಬೆಳಿಗ್ಗೆ 10.20 ವಿಟ್ಲದಿಂದ ಅಳಿಕೆಗೆ, 10.35ಅಳಿಕೆಯಿಂದ ವಿಟ್ಲಕ್ಕೆ, ಮಧ್ಯಾಹ್ನ 1.25 ಕ್ಕೆ ಪುತ್ತೂರಿನಿಂದ ಅಳಿಕೆಗೆ ಹಾಗೂ 2.15 ಕ್ಕೆ ಅಳಿಕೆಯಿಂದ ಪುತ್ತೂರಿಗೆ ಬಸ್ ಸೇವೆ ಆರಂಭಗೊಂಡಿದ್ದು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಶಾಸಕರು ಮನವಿ ಮಾಡಿದ್ದಾರೆ.