ಟೀಮ್ ಇಂಡಿಯಾ ಸ್ಪೋಟಕ ಬ್ಯಾಟ್ಸ್ ಮೆನ್ ರಿಷಬ್ ಪಂತ್ ಕಾರು ಅಪಘಾತ
ನವದೆಹಲಿ: ಭಾರತ ಕ್ರಿಕೆಟ್ ತಂಡದ ಆಟಗಾರ ರಿಷಭ್ ಪಂತ್ ಇಂದು ಬೆಳಗ್ಗೆ ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ನಡೆದ ಕಾರು ಅಪಘಾತದಲ್ಲಿ ಗಾಯಗೊಂಡಿದ್ದಾರೆ.
25 ವರ್ಷದ ಪಂತ್ ಅವರ ತಲೆ ಮತ್ತು ಕಾಲಿಗೆ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆನ್ನಿಗೆ ತೀವ್ರ ಪೆಟ್ಟಾಗಿದೆ ಎನ್ನಲಾಗಿದೆ.
ಪಂತ್ ಅವರ ಬಿಎಂಡಬ್ಳ್ಲು ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿದೆ. ಅಪಘಾತದ ಬಳಿಕ ತೆಗೆಯಲಾದ ಚಿತ್ರದಲ್ಲಿ ಪಂತ್ ಅವರಿದ್ದ ಕಾರು ಸಂಪೂರ್ಣವಾಗಿ ಸುಟ್ಟು ಹೋಗಿರುವ ಸ್ಥಿತಿಯಲ್ಲಿದೆ. ಪಂತ್ ಅವರ ತಲೆಗೆ ಬ್ಯಾಂಡೇಜ್ ಹಾಕಲಾದ ಚಿತ್ರ ವೈರಲ್ ಆಗುತ್ತಿದೆ.