ಕರಾವಳಿಕ್ರೀಡೆ

ಪೆನ್ ಪಾಯಿಂಟ್ ವತಿಯಿಂದ ಕೋಬ್ರಾಸ್ 3ನೇ ಆವೃತಿಯ ಕ್ರಿಕೆಟ್ ಫೆಸ್ಟ್: ಚಾಂಪಿಯನ್ ಆಗಿ ಹೊರಹೊಮ್ಮಿದ ಬ್ಲೂ ಹಂಟರ್ಸ್ ತಂಡ



ಪುತ್ತೂರು: ಸಾಹಿತ್ಯ ಮತ್ತು ಸಾಮಾಜಿಕ ಚಟುವಟಿಕೆಗಳ ಮೂಲಕ ಸಮಾಜದಲ್ಲಿ ಹೆಸರುವಾಸಿಯಾದ, ವಿವಿಧ ಕ್ಷೇತ್ರದ ಸಾಧಕರನ್ನೊಳಗೊಂಡ “ಪೆನ್ ಪಾಯಿಂಟ್ ಸ್ನೇಹ ವೇದಿಕೆ” ತಂಡದ ಮೂರನೇ ಆವೃತಿಯ ಕೋಬ್ರಾಸ್ ಕ್ರಿಕೆಟ್ ಫೆಸ್ಟ್ -2024 ಪಂದ್ಯಾಕೂಟವೂ, ಜನವರಿ 27ರಂದು, ಪರ್ಪುಂಜದ ಅಡ್ಕ ಕ್ರೀಡಾಂಗಣದಲ್ಲಿ ಅದ್ಧೂರಿಯಿಂದ ನಡೆಯಿತು.

ಎಂಕೆಎಂ ಕಾವು ಇವರ ಉದ್ಘಾಟನೆ ಹಾಗೂ ಸ್ಥಾಪಕ ಅಧ್ಯಕ್ಷರಾದ ಅಸಪ ಗೇರುಕಟ್ಟೆಯವರ ಪ್ರಮಾಣವಚನ ಭೋದನೆಯೊಂದಿಗೆ ಆರಂಭಗೊಂಡ ಲೀಗ್ ಮಾದರಿಯ ಪಂದ್ಯಾಕೂಟದಲ್ಲಿ, ಪೆನ್ ಪಾಯಿಂಟ್ ಬಳಗದ ಇರ್ಫಾನ್ ಕನ್ಯಾರಕೋಡಿ ಮಾಲಕತ್ವದ “ಬ್ಲೂ ಹಂಟರ್ಸ್” ಶಾಕಿರ್ ಹಕ್ ಮಾಲಕತ್ವದ “ರೋಯಲ್ ಇಂಡಿಯನ್ಸ್” ರಾಝಿಕ್ ಬಿಎಂ ಮಾಲಕತ್ವದ “ಅಟ್ಯಾಕರ್ಸ್” ಹಾಗು ಸರ್ಫ್ರಾಜ್ ವಳಾಲ್ ಮಾಲಕತ್ವದ “ಐಮೇಡ್ ವಾರಿಯರ್ಸ್” ಸೇರಿದಂತೆ ಒಟ್ಟು ನಾಲ್ಕು ತಂಡಗಳು ಭಾಗವಹಿಸಿದ್ದವು.

2024ರ ಪೆನ್ ಪಾಯಿಂಟ್ ಚಾಪಿಯನ್ ಪಟ್ಟಕ್ಕಾಗಿ, ಬೆಳಗ್ಗೆಯಿಂದ ಸಂಜೆಯವರೆಗೆ ನಡೆದ ಜಿದ್ಧಾಜಿದ್ದಿನ ಕ್ರಿಕೆಟ್ ಸಮರದಲ್ಲಿ, ಅಂತಿಮವಾಗಿ ಇರ್ಪಾನ್ ಕನ್ಯಾರಕೋಡಿ ಮಾಲಕತ್ವದ “ಬ್ಲೂ ಹಂಟರ್ಸ್” ಚಾಂಪಿಯನ್ ಪಟ್ಟಕ್ಕೇರಿತು. ಸರ್ಫ್ರಾಝ್ ಮಾಲಕತ್ವದ ಪೆನ್ ಪಾಯಿಂಟ್ ಐಮೇಡ್ ವಾರಿಯರ್ಸ್ ರನ್ನರ್ಸ್ ಅಪ್ ಗೆ ತೃಪ್ತಿಪಟ್ಟಿತು.

ಪಂದ್ಯಕೂಟದಲ್ಲಿ ಭಾಗವಹಿಸಿದವರಿಗೆ ಪೆನ್‌ಪಾಯಿಂಟ್ ಅನಿವಾಸಿ ಸದಸ್ಯರಾದ ಇರ್ಪಾನ್ ಕನ್ಯಾರಕೋಡಿ, ಶಾಕಿರ್ ಹಕ್ ಮತ್ತು ಬಶೀರ್ ಚೆನ್ನಾರ್ ಇವರ ವತಿಯಿಂದ ಡಿನ್ನರ್ ವ್ಯವಸ್ಥೆ ಮಾಡಲಾಗಿತ್ತು.

Leave a Reply

Your email address will not be published. Required fields are marked *

error: Content is protected !!