ಕರಾವಳಿಜಿಲ್ಲೆ

ಸುರತ್ಕಲ್ ಟೋಲ್’ಗೇಟ್ ಹೋರಾಟ: ಕಾನೂನು ಕೈಗೆತ್ತಿಕೊಂಡರೆ ಸರಕಾರ ಕ್ರಮ ಕೈಗೊಳ್ಳುತ್ತದೆ – ನಳಿನ್ ಕುಮಾರ್ ಕಟೀಲ್



ಮಂಗಳೂರು: ಸುರತ್ಕಲ್ ಟೋಲ್ ವಿರುದ್ದ ಹೋರಾಟ ತೀವ್ರಗೊಂಡಿದ್ದು ಇದೀಗ ಸಂಸದ ನಳಿನ್ ಕುಮಾರ್ ಮಾಧ್ಯಮದವರೊಂದಿಗೆ ಮಾತನಾಡಿ ಹೋರಾಟಗಾರರಿಗೆ 20 ದಿವಸದ ಕಾಲವಕಾಶ ನೀಡುವಂತೆ ವಿನಂತಿಸಿಕೊಂಡಿದ್ದಾರೆ.

ಹೋರಾಟಕ್ಕೆ ನನ್ನ ವಿರೋಧವೂ ಇಲ್ಲ ಬೆಂಬಲವಿಲ್ಲ. ಈಗಾಗಲೇ ಸಂಬಂಧಪಟ್ಟವರಲ್ಲಿ ವಿನಂತಿಸಿದ್ದೇವೆ. ಜಿಲ್ಲಾಧಿಕಾರಿಗಳು ವಿನಂತಿಸಿದ್ದಾರೆ. ನಾನು ಏನಾದರೂ ಮಾತನಾಡಿದರೆ ರಾಜಕೀಯವಾಗುತ್ತದೆ ಎಂದರು.

ಹೋರಾಟ ಮಾಡುವುದಕ್ಕೆ ನಮ್ಮ ವಿರೋಧವಿಲ್ಲ. ಶಾಂತಿಯುತ ಹೋರಾಟಕ್ಕೆ ನಮ್ಮ‌ ಅಭ್ಯಂತರವಿಲ್ಲ. ಇದು ಪ್ರಜಾಪ್ರಭುತ್ವ ದೇಶ ಅವರಿಗೆ ಅದರ ಹಕ್ಕಿದೆ ಎಂದರು. ಕಾನೂನು ಕೈಗೆತ್ತಿಕೊಂಡರೆ ಸರಕಾರ ಕ್ರಮ ಕೈಗೊಳ್ಳುತ್ತದೆ. ನಾನು ಇದನ್ನು ತೆಗೆದುಕೊಡುತ್ತೇನೆ. ಅದಕ್ಕೆ ಕಟಿ ಬದ್ದವಾಗಿದ್ದೇನೆ ಎಂದರು.

Leave a Reply

Your email address will not be published. Required fields are marked *

error: Content is protected !!