ಜಿಲ್ಲೆ

ಕರಾವಳಿಜಿಲ್ಲೆ

ಮಾಡನ್ನೂರು ನೂರುಲ್ ಹುದಾದಲ್ಲಿ
‘ಲೀಡರ‍್ಸ್ ಸಮ್ಮಿಟ್’

ಪುತ್ತೂರು: ಪರಿಶುದ್ಧ ಇಸ್ಲಾಂ ಧರ್ಮವು ಎಂದಿಗೂ ಅಸಹಿಷ್ಣತೆಯನ್ನು ಸಹಿಸದ ಧರ್ಮವಾಗಿದೆ ಎಂದು ಪಾಣಕ್ಕಾಡ್ ಅಸ್ಸಯ್ಯದ್ ಅಬ್ಬಾಸ್ ಅಲಿ ಶಿಹಾಬ್ ತಂಙಳ್ ಹೇಳಿದರು. ಮಾಡನ್ನೂರು ನೂರುಲ್ ಹುದಾ ಪ್ರಚಾರ ಅಭಿಯಾನದ ಅಂಗವಾಗಿ ಅಕಾಡೆಮಿಯ ಕ್ಯಾಂಪಸ್‌ನಲ್ಲಿ ನಡೆದ ಲೀಡರ‍್ಸ್ ಸಮ್ಮಿಟ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕರ್ನಾಟಕದಲ್ಲಿ ನೂರುಲ್ ಹುದಾ ವಿದ್ಯಾಸಂಸ್ಥೆ ಬರೀ ಏಳು ವರ್ಷಗಳಲ್ಲಿ ಎಲ್ಲರ ಗಮನ ಸೆಳೆದಿದ್ದು ಮುಂದಕ್ಕೆ ಈ ಸಂಸ್ಥೆಯನ್ನು ಇನ್ನಷ್ಟು ಶಕ್ತಿಯುತವಾಗಿ ಬೆಳೆಸಲು ಎಲ್ಲರೂ ಸಹಕಾರ ನೀಡಬೇಕೆಂದು ಅವರು ಹೇಳಿದರು. ಸಂಸ್ಥೆಯ ಪ್ರಾಂಶುಪಾಲ ಅಡ್ವಕೇಟ್ ಹನೀಫ್ ಹುದವಿ ದೇಲಂಪಾಡಿ ಮಾತನಾಡಿ ಕರುನಾಡ ಮಣ್ಣಿನಲ್ಲಿ ಸಮನ್ವಯ ಶಿಕ್ಷಣಕ್ಕೆ ತನ್ನದೇ ಆದ ಗುರಿಯೊಂದಿಗೆ ಹೆಜ್ಜೆಯನ್ನಿಟ್ಟಿರುವ ನೂರುಲ್ ಹುದಾ ವಿದ್ಯಾಸಂಸ್ಥೆಯು ಸಹೃದಯಿಗಳ ಸಹಕಾರದ ಫಲವಾಗಿ ಕೇವಲ ಏಳು ವರ್ಷಗಳಲ್ಲಿ ಉತ್ತಮ ಅಭಿವೃದ್ಧಿ ಸಾಧಿಸಿದೆ ಎಂದು ಹೇಳಿದರು. ಸಂಸ್ಥೆಯ ಅಧ್ಯಕ್ಷ ಬುಶ್ರಾ ಅಬ್ದುಲ್ ಅಝೀಝ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಮಸ್ತ ವಿದ್ಯಾಭ್ಯಾಸ ಮಂಡಳಿ ಕಾಸರಗೋಡು ಜಿಲ್ಲಾ ಪ್ರ.ಕಾರ್ಯದರ್ಶಿ ಸೈಯ್ಯದ್ ಹುಸೈನ್ ತಂಙಳ್ ಮಾಸ್ತಿಕುಂಡು ಪ್ರಾರ್ಥಿಸಿದರು. ಸೈಯ್ಯದ್ ಬುರ್ಹಾನ್ ಅಲೀ ತಂಙಳ್, ಜಮಾಅತ್ ಅಧ್ಯಕ್ಷ ಇಸ್ಮಾಯಿಲ್ ಹಾಜಿ, ಸಂಸ್ಥೆಯ ಕಾರ್ಯದರ್ಶಿ ಹಿರಾ ಅಬ್ದುಲ್ ಖಾದರ್ ಹಾಜಿ, ಮಂಗಳ ಅಬೂಬಕ್ಕರ್ ಹಾಜಿ, ಅಬ್ದುಲ್ ಖಾದರ್ ಹಾಜಿ ಬಯಂಬಾಡಿ, ಎನ್ ಅಬ್ದುಲ್ ಖಾದರ್ ಮುಸ್ಲಿಯಾರ್, ನಿವೃತ್ತ ಎಎಸ್ಸೈ ಎಂ.ಡಿ ಹಸೈನಾರ್,  ರಶೀದ್ ಹಾಜಿ ಪರ್ಲಡ್ಕ. ಎಲ್.ಟಿ ಅಬ್ದುಲ್ ರಝಾಕ್ ಹಾಜಿ, ಎನ್.ಎಸ್ ಅಬ್ದುಲ್ ಹಾಜಿ ಈಶ್ವರಮಂಗಳ, ಆದಂ ಹಾಜಿ ಕಮ್ಮಾಡಿ, ಹಕೀಂ ಪರ್ತಿಪ್ಪಾಡಿ, ಹಮೀದ್ ಮುಸ್ಲಿಯಾರ್ ಮಡಿಕೇರಿ, ಹಂಝ ಹಾಜಿ ಕುಶಾಲನಗರ, ಮೂಸಾ ಕುದ್ಕುಪದವು, ಬಾತಿಷಾ ಹಾಜಿ ಪಾಟ್ರಕೋಡಿ ಅಶ್ರಫ್ ಹಾಜಿ ಪಳ್ಳತ್ತೂರು, ತಾಜ್ ಮಹಮ್ಮದ್, ಸಿ.ಎಚ್, ಅಬ್ದುಲ್ ಅಝೀಝ್ ಹಾಜಿ, ಇಬ್ರಾಹಿಂ ಹಾಜಿ ಮಂಡೆಕೋಲು, ಹಸೈನ್ ಹಾಜಿ ಸಿಟಿ ಬಜಾರ್, ಕೆ.ಕೆ ಇಬ್ರಾಹಿಂ ಹಾಜಿ, ಹಮೀದ್ ಹಾಜಿ ಸುಳ್ಯ, ಅಬ್ದುಲ್ ರಝಾಕ್ ಆತೂರು, ಹಾಶಿಂ ದಾರಿಮಿ, ಮುಹಮ್ಮದ್ ಮುಸ್ಲಿಯಾರ್ ಮುಂಡೋಳೆ, ಮುಹಮ್ಮದ್ ಒಮೇಗಾ, ಫಕ್ರುದ್ದೀನ್ ಹಾಜಿ ಕೊಯ್ಲ, ಸಲಾಂ ಪದಡ್ಕ, ಇಸಾಕ್ ಪಡೀಲ್, ಉಮರ್ ಸುಳ್ಯ, ಬಶೀರ್ ಸಿದ್ದಾಪುರ ಮುಂತಾದ ಹಲವಾರು ಗಣ್ಯರು ಭಾಗವಹಿಸಿದ್ದರು. ಸಂಸ್ಥೆಯ ಮ್ಯಾನೇಜರ್ ಕೆ.ಯು ಖಲೀಲುರ್ರಹ್ಮಾನ್ ಅರ್ಶದಿ ಕೊಲ್ಪೆ ಸ್ವಾಗತಿಸಿ ಸಂಸ್ಥೆಯ ಮುಂದಿನ ಯೋಜನೆಗಳ ಬಗ್ಗೆ ವಿವರಿಸಿದರು. ಮಾಡನ್ನೂರು ನೂರುಲ್ ಹುದಾ ವಿದ್ಯಾಸಂಸ್ಥೆಯು ಕ್ಷಿಪ್ರ ಅವಧಿಯಲ್ಲಿ ಅಭೂತಪೂರ್ವ ಯಶಸ್ಸನ್ನು ಸಾಧಿಸಿದೆ. ಸಂಸ್ಥೆಗೆ ಈಗಾಗಲೇ ಅದೆಷ್ಟೋ ಮಂದಿ ಪ್ರತಿಫಲಾಪೇಕ್ಷೆಯಿಲ್ಲದೇ ಸಹಕಾರ ನೀಡುತ್ತಿದ್ದು ಸಂಸ್ಥೆಯ ಅಭಿವೃದ್ಧಿಗೆ ಪ್ರಮುಖ ಕಾರಣವಾಗಿದೆ. ವಿದ್ಯಾಸಂಸ್ಥೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು ನೂರಾರು ವಿದ್ಯಾರ್ಥಿಗಳು ವಿದ್ಯಾರ್ಜನೆಗೈಯುತ್ತಿದ್ದಾರೆ. ವಿದ್ಯಾಸಂಸ್ಥೆಯನ್ನು ಭವಿಷ್ಯದಲ್ಲಿ ಇನ್ನಷ್ಟು ಸಧೃಢವಾಗಿ ಬೆಳೆಸಲು ಎಲ್ಲರ ಸಹಕಾರ ಅಗತ್ಯ. -ಕೆ.ಯು ಖಲೀಲುರ್ರಹ್ಮಾನ್ ಅರ್ಶದಿ ಕೋಲ್ಪೆ, ಮ್ಯಾನೇಜರ್ 

Read More
ಕರಾವಳಿಜಿಲ್ಲೆ

ಸುಳ್ಯ : ಬಸ್ಸಿನ ಹಿಂಬದಿಯ ಟಯರ್ ಮಹಿಳೆಯ ಕಾಲಿನ ಮೇಲೆ ಚಲಿಸಿ ಕಾಲು ಮುರಿತ

ಸುಳ್ಯ: ಬೆಳ್ಳಾರೆಯಿಂದ ಬರುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ನಿಂದ ಸೋಣಂಗೇರಿ ಬಳಿ ಮಹಿಳೆಯೋರ್ವರು ಇಳಿಯುವ ಸಂದರ್ಭ ಬಿದ್ದು ಕಾಲಿಗೆ ಗಂಭೀರ ಗಾಯಗೊಂಡ ಘಟನೆ ಇಂದು ಸೋಣಂಗೇರಿಯಲ್ಲಿ ನಡೆದಿದೆ. ಮಹಿಳೆ

Read More
ಕರಾವಳಿಜಿಲ್ಲೆ

 ಪುತ್ತೂರು: ಕುಂಬ್ರದಲ್ಲಿ ನಿಲ್ಲಿಸಿದ್ದ ಸ್ಕೂಟರ್ ಕಳವಿಗೆ ಯತ್ನ-ಸಿಸಿ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯ

ಪುತ್ತೂರು: ಕುಂಬ್ರ ನ್ಯೂ ರಾಯಲ್ ದರ್ಬಾರ್ ಹೊಟೇಲ್ ಬಳಿ ನಿಲ್ಲಿಸಲಾಗಿದ್ದ ಆಕ್ಟಿವಾ ಸ್ಕೂಟರನ್ನು ಕಳವು ಮಾಡಲು ಯತ್ನಿಸಿದ ಘಟನೆ ಸೆ.18ರಂದು ರಾತ್ರಿ ನಡೆದಿದ್ದು ಕಳವಿಗೆ ಯತ್ನ ನಡೆಸಿದ ದೃಶ್ಯಗಳು ಸಿಸಿ ಕೆಮರಾದಲ್ಲಿ ಸೆರೆಯಾಗಿದೆ. ರಾಯಲ್ ದರ್ಬಾರ್ ಹೊಟೇಲ್ ಮಾಲಿಕ ಹಮೀದ್ ರವರು ತನ್ನ ಸ್ಕೂಟರನ್ನು ಹೊಟೇಲ್ ಮುಂಭಾಗದಲ್ಲಿ ನಿಲ್ಲಿಸಿ ಮಂಗಳೂರಿಗೆ ತೆರಳಿದ್ದರು. ಮಂಗಳೂರಿನಿಂದ ಬರುವಾಗ ತಡವಾಗಿರುವ ಕಾರಣ ಸ್ಕೂಟರ್ ಕೊಂಡು ಹೋಗಿರಲಿಲ್ಲ. ಅದೇ ದಿನ ರಾತ್ರಿ ಅಲ್ಲಿಗೆ ಸ್ಕೂಟರಿನಲ್ಲಿ ಬಂದ ಇಬ್ಬರು ಯುವಕರು ಸ್ಕೂಟರನ್ನು ಕಳವು ಮಾಡಲು ಯತ್ನ ನಡೆಸಿದ್ದಾರೆ. ಹೊಟೇಲ್ ಮಾಲಿಕರು ಸ್ಕೂಟರ್‌ನ ಹ್ಯಾಂಡ್ ಲಾಕ್ ಮಾಡಿರುವ ಕಾರಣ ಕೊಂಡೊಯ್ಯಲು ಸಾಧ್ಯವಾಗಿಲ್ಲ. ಆದರೂ ಸ್ಕೂಟರಿನಲ್ಲಿದ್ದ ಹೆಲ್ಮೆಟನ್ನು ಕಳವು ಮಾಡಿದ್ದು ಹಳೆಯ ಹೆಲ್ಮೆಟ್ ಅಲ್ಲಿ ಇಟ್ಟು ತೆರಳಿದ್ದಾರೆ. ಹ್ಯಾಂಡ್ ಲಾಕ್ ಹಾಕಿರುವ ಕಾರಣ ಕಳ್ಳತನ ಮಾಡಲು ಸಾಧ್ಯವಾಗಿಲ್ಲ. 

Read More
ಕರಾವಳಿಜಿಲ್ಲೆ

ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಮೇನಾಲ ಮಧುರಾ ಇಂಟರ್ ನ್ಯಾಷನಲ್ ಸ್ಕೂಲ್’ಗೆ ಹಲವು ಪ್ರಶಸ್ತಿ

ಪುತ್ತೂರು: ಮೇನಾಲ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಮಧುರಾ ಇಂಟರ್ ನ್ಯಾಷನಲ್ ಸ್ಕೂಲ್’ನ ಶಾಮಿಲ್ ಮಧುರಾ ಅಬ್ದುಲ್ ಖಾದರ್ ಹಿರಿಯರ ವಿಭಾಗದ ಹಿಂದಿ ಕಂಠಪಾಠ ಸ್ವರ್ಧೆಯಲ್ಲಿ ಪ್ರಥಮ

Read More
ಜಿಲ್ಲೆರಾಜ್ಯ

ಸಚಿವ ಡಾ.ಕೆ.ಸುಧಾಕರ್ ರಾಜೀನಾಮೆ ನೀಡಲಿ: ಹೆಚ್.ಡಿ.ಕೆ ಆಗ್ರಹ

‘ ಬೆಂಗಳೂರು: ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಇಬ್ಬರ ಸಾವಿನ ಪ್ರಕರಣಕ್ಕೆ ನೈತಿಕ ಹೊಣೆ ಹೊತ್ತು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ರಾಜೀನಾಮೆ ನೀಡಬೇಕು ಎಂದು

Read More
Uncategorizedಕರಾವಳಿಜಿಲ್ಲೆ

ದ.ಕ ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಅಧ್ಯಕ್ಷರಾಗಿ ಅಶ್ರಫ್ ಕಲ್ಲೇಗ ಪುನರಾಯ್ಕೆ

ಪುತ್ತೂರು: ದ.ಕ ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಇದರ ಮಹಾಸಭೆ ಮುರ ಎಂಪಿಎಂ ಸಭಾಂಗಣದಲ್ಲಿ ನಡೆಯಿತು. ಯುವಜನ ಪರಿಷತ್ ರಾಜ್ಯ ಸಂಚಾಲಕರಾದ ನ್ಯಾಯವಾದಿ ಎಂ.ಪಿ ಅಬೂಬಕ್ಕರ್ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಅಶ್ರಫ್ ಕಲ್ಲೇಗ ಪುನರಾಯ್ಕೆಗೊಂಡರು. ಪ್ರಧಾನ ಕಾರ್ಯದರ್ಶಿಯಾಗಿ ಅಶ್ರಫ್ ಬಾವು ಪಡೀಲ್, ಉಪಾಧ್ಯಕ್ಷರುಗಳಾಗಿ ಇಬ್ರಾಹಿಂ ಸಾಗರ್, ಮೂಸಾ ಮಾಣಿ ಹಾಗೂ ಶರೀಫ್ ಸಾಲ್ಮರ ಆಯ್ಕೆಯಾದರು. ಕಾರ್ಯದರ್ಶಿಯಾಗಿ ಬಶೀರ್ ಪರ್ಲಡ್ಕ, ನೌಶಾದ್ ಬೊಳ್ವಾರು ಹಾಗೂ ಶರೀಫ್ ಮುಕ್ರಂಪಾಡಿ, ಕೋಶಾಧಿಕಾರಿಯಾಗಿ ಅಡ್ವೊಕೇಟ್ ಶಾಕಿರ್ ಹಾಜಿ ಮಿತ್ತೂರು ಆಯ್ಕೆಯಾದರು. ಸಂಘಟನಾ ಕಾರ್ಯದರ್ಶಿಯಾಗಿ ಜುನೈದ್ ಸಾಲ್ಮರ, ಸೂಫಿ ಬಪ್ಪಳಿಗೆ, ರಫೀಕ್ ಬಾಂಬೆ, ಹಸೈನಾರ್ ಬನಾರಿ, ಯೂಸುಫ್ ತಾರಿಗುಡ್ಡೆ, ಹಮೀದ್ ಸೋಂಪಾಡಿ, ಇಬ್ರಾಹಿಂ ಪುತ್ತುಸೇಟ್, ಪತ್ರಿಕಾ ಕಾರ್ಯದರ್ಶಿಯಾಗಿ ಅಬೂಬಕ್ಕರ್ ಮುಲಾರ್‌ರವರನ್ನು ಆಯ್ಕೆ ಮಾಡಲಾಯಿತು. ಸಂಚಾಲಕರಾಗಿ ಖಾಸಿಂ ಹಾಜಿ ಮಿತ್ತೂರು, ನ್ಯಾಯವಾದಿ ನೂರುದ್ದೀನ್ ಸಾಲ್ಮರ ಆಯ್ಕೆಯಾದರು. ಕಾನೂನು ಸಲಹೆಗಾರರಾಗಿ ಕೆ.ಎಂ ಸಿದ್ದೀಕ್ ಆಯ್ಕೆಯಾದರು. ಸಮಿತಿ ಸದಸ್ಯರಾಗಿ ಇಸ್ಮಾಯಿಲ್ ಬಪ್ಪಳಿಗೆ, ರಶೀದ್ ಮುರ, ಹಮೀದ್ ಮೌಲ ಕಬಕ, ಆದಂ ಕೆದುವಡ್ಕ, ಅಲ್ತಾಫ್ ಬೆಟ್ಟಂಪಾಡಿ, ಇಸ್ಮಾಯಿಲ್ ಸಾಲ್ಮರ, ಅಬ್ದುಲ್ ಹಮೀದ್ ಸಾಲ್ಮರ, ಸಿದ್ದೀಕ್ ಕಲ್ಲೇಗ, ಉನೈಸ್ ಕಬಕ, ಬಾತಿಷ ವಳತ್ತಡ್ಕ ಹಾಗೂ ಶರೀಫ್ ಮುಕ್ರಂಪಾಡಿ ಆಯ್ಕೆಯಾಗಿದ್ದಾರೆ.

Read More
ಕರಾವಳಿಜಿಲ್ಲೆ

ಬಾತಿಷಾ ಸುಲ್ತಾನ್ ಸ್ಮರಣಾರ್ಥ ತಿಂಗಳಾಡಿಯಲ್ಲಿ ಬೃಹತ್ ರಕ್ತದಾನ ಶಿಬಿರ

ಪುತ್ತೂರು: ಎಸ್ಕೆಎಸ್ಸೆಸ್ಸೆಫ್ ವಿಖಾಯ ಕುಂಬ್ರ ವಲಯದ ಆಶ್ರಯದಲ್ಲಿ ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಸಹಯೋಗದಲ್ಲಿ ಮರ್‌ಹೂಂ ಬಾತಿಷಾ ಸುಲ್ತಾನ್ ಸ್ಮರಣಾರ್ಥ ಬೃಹತ್ ರಕ್ತದಾನ ಶಿಬಿರ ಸೆ.೧೮ರಂದು ತಿಂಗಳಾಡಿ

Read More
ಕರಾವಳಿಜಿಲ್ಲೆ

ಸಾಮಾಜಿಕ ಕಾರ್ಯಕರ್ತ ಶಬೀರ್ ಕಟ್ಟತ್ತಾರು ಹೃದಯಾಘಾತದಿಂದ ನಿಧನ

ಪುತ್ತೂರು: ಮಾಡಾವು ಸಮೀಪದ ಕಟ್ಟತ್ತಾರು ನಿವಾಸಿ ಶಬೀರ್(25.ವ) ಅವರು ಹೃದಯಘಾತದಿಂದ ಸೆ.17ರಂದು ನಿಧನರಾಗಿದ್ದಾರೆ. ಎದೆ ನೋವು ಕಾಣಿಸಿಕೊಂಡ ಶಬೀರ್ ಅವರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸುವ ಮಧ್ಯೆಯೇ ಮೃತಪಟ್ಟಿರುವುದಾಗಿ

Read More
ಕರಾವಳಿಜಿಲ್ಲೆ

ಮುಸ್ಲಿಮರು ಮಾತ್ರವಲ್ಲ ಹಿಂದೂಗಳೂ ಮುಂದಿನ ದಿನಗಳಲ್ಲಿ ಸರಕಾರದ ವಿರುದ್ಧ ತಿರುಗಿ ಬೀಳಲಿದ್ದಾರೆ ಎಸ್.ಬಿ ದಾರಿಮಿ

ಪುತ್ತೂರು: ಸರಕಾರದ ಅನ್ಯಾಯ ಮಿತಿ ಮೀರುತ್ತಿದ್ದು ನ್ಯಾಯ ಕೇಳಿದವರಿಗೆ ನ್ಯಾಯ ನಿರಾಕರಣೆಯಾಗುತ್ತಿದೆ. ಸರಕಾರ ಹಿಂದೂ ಧರ್ಮದ ತತ್ವಕ್ಕೆ ಮೋಸ ಮಾಡುವ ಕಾರ್ಯ ಮಾಡುತ್ತಿದ್ದು ಪರಿಸ್ಥಿತಿ ಇದೇ ರೀತಿ ಮುಂದುವರಿದಲ್ಲಿ ಮುಂದಿನ ದಿನಗಳಲ್ಲಿ ಹಿಂದೂಗಳೇ ಸರಕಾರದ ವಿರುದ್ಧ ಮುಗಿ ಬೀಳಲಿದ್ದಾರೆ ಎಂದು ಮುಸ್ಲಿಂ ಧಾರ್ಮಿಕ ವಿಧ್ವಾಂಸ ಎಸ್.ಬಿ ಮಹಮ್ಮದ್ ದಾರಿಮಿ ಹೇಳಿದರು. ಮಂಗಳೂರಿನಲ್ಲಿ ಸುರತ್ಕಲ್ ವಲಯ ಮುಸ್ಲಿಂ ಐಕ್ಯತಾ ವೇದಿಕೆ ವತಿಯಿಂದ ಸೆ.16ರಂದು ಸಂಜೆ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು. ನಿಮಗೆ ಅಧಿಕಾರ ಇದೆ ಎಂದು ಅನ್ಯಾಯವನ್ನೇ ಮಾಡುತ್ತಿದ್ದೀರಿ. ಇದು ನಿಮಗೆ ತಿರುಗುಬಾಣವಾಗಲಿದ್ದು ಮುಸ್ಲಿಮರು ಮಾತ್ರವಲ್ಲ ಹಿಂದೂಗಳೂ ನಿಮ್ಮ ವಿರುದ್ಧ ಬೀದಿಗಿಳಿಯಲಿದ್ದಾರೆ ಎಂದು ಹೇಳಿದರು. ಪ್ರವೀಣ್ ನೆಟ್ಟಾರು ಮನೆಗೆ ಭೇಟಿ ನೀಡಿದಾಗ ಸಂಸದರ ಕಾರು ಅಲ್ಲಾಡಿದ್ದನ್ನು ನಾವು ನೋಡಿದ್ದೇವೆ. ನಿಮ್ಮ ಧೋರಣೆ ಬದಲಾಯಿಸದೇ ಇದ್ದಲ್ಲಿ ನಿಮಗೆ ಮುಂದಕ್ಕೂ ಇದೇ ಪರಿಸ್ಥಿತಿ  ಬರಲಿದೆ ಎಂದವರು ಹೇಳಿದರು.

Read More
ಕರಾವಳಿಕ್ರೈಂಜಿಲ್ಲೆ

ಪುತ್ತೂರು ಫೂಟ್’ವೇರ್ ಅಂಗಡಿಯಿಂದ ಲಕ್ಷಾಂತರ ರೂ ಹಣ ಕಳ್ಳತನ

ಪುತ್ತೂರು: ಇಲ್ಲಿನ ಮುಖ್ಯರಸ್ತೆಯಲ್ಲಿರುವ ಪ್ರಕಾಶ್ ಫೂಟ್‌ವೇರ್ ಅಂಗಡಿಗೆ ಕಳ್ಳರು ನುಗ್ಗಿ ಲಕ್ಷಾಂತರ ರೂಪಾಯಿ ನಗದು ಕಳವು ಮಾಡಿದ ಘಟನೆ ಸೆ.16ರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಪ್ರಕಾಶ್ ಫೂಟ್‌ವೇರ್

Read More
error: Content is protected !!