ಪುತ್ತೂರು: ಎಚ್.ಎಂ.ಎಸ್ ಗ್ರೂಪ್‌ನವರ ಭಾರತ್ ವೆಹಿಕಲ್ ಬಜಾರ್ ಅ.30ರಂದು ಮಿತ್ತೂರಿನಲ್ಲಿ ಶುಭಾರಂಭಗೊಂಡಿತು. ಸಂಸ್ಥೆಯ ಕಛೇರಿಯನ್ನು ಉದ್ಘಾಟಿಸಿದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ ಯಾವುದೇ ವ್ಯವಹಾರದಲ್ಲಿ ಯಶಸ್ಸು ಕಾಣಬೇಕಾದರೆ ಪ್ರಾಮಾಣಿಕತೆ ಮುಖ್ಯ, ಪ್ರಾಮಾಣಿಕ ವ್ಯವಹಾರವನ್ನು ನಾವು ಮಾಡಿದಾಗ ಜನರ ವಿಶ್ವಾಸ ಗಳಿಸಲು ಸಾಧ್ಯವಾಗುತ್ತದೆ, ಜನರ ವಿಶ್ವಾಸವೇ ಉದ್ಯಮದ ಯಶಸ್ಸಿನ ಮೂಲ ಎಂದು ಅವರು ಹೇಳಿದರು.ನಾವು ಮಾಡುವ ವ್ಯವಹಾರವನ್ನು ನಾವು ಪ್ರೀತಿಸಬೇಕು, ಆಗ ಆ ವ್ಯವಹಾರ ಯಶಸ್ಸು ಕಾಣುತ್ತದೆ ಎಂದು ಹೇಳಿದ ಶಾಸಕರು ಭಾರತ್ ವೆಹಿಕಲ್ ಬಜಾರ್ ಅತ್ಯುತ್ತಮ ವ್ಯವಹಾರದ ಮೂಲಕ ಗ್ರಾಹಕರ ಮೆಚ್ಚುಗೆ ಗಳಿಸಿದ ಸಂಸ್ಥೆಯಾಗಿ ಬೆಳಗಲಿ ಶುಭ ಹಾರೈಸಿದರು. ಎಚ್.ಎಂ.ಎಸ್ ಗ್ರೂಪ್ ಬೆಂಗಳೂರು ಇದರ ಸುಭೋದ್ ಬಿ ಶೆಟ್ಟಿ ಮಾತನಾಡಿ ಭಾರತ್ ವೆಹಿಕಲ್ ಬಜಾರ್ ಮೂಲಕ ಉತ್ತಮ ವಿಶ್ವಾಸಾರ್ಹ ವ್ಯವಹಾರದ ಮೂಲಕ ವಾಹನಗಳ ಖರೀದಿ, ಮಾರಾಟ ವ್ಯವಹಾರ ನಡೆಯಲಿದ್ದು ಜನರು ಪೂರ್ಣ ವಿಶ್ವಾಸದೊಂದಿಗೆ ಇಲ್ಲಿ ವ್ಯವಹರಿಸಬಹುದಾಗಿದೆ ಎಂದು ಹೇಳಿ ಸಂಸ್ಥೆಗೆ ಶುಭ ಹಾರೈಸಿದರು. ವಾಹನಗಳ ಮಾರಾಟ ಕೇಂದ್ರವನ್ನು ಉದ್ಘಾಟಿಸಿದ ಸಯ್ಯದ್ ಮಹಮ್ಮದ್ ಮಿಹ್ರಾಜ್ ಅಲ್ ಹಾದಿ ಅಲ್ ಅಶ್‌ಅರಿ ತಂಙಳ್ ಮಾತನಾಡಿ ವಿಶ್ವಾಸಾರ್ಹ ವ್ಯವಹಾರದ ಮೂಲಕ ಭಾರತ ವೆಹಿಕಲ್ ಬಜಾರ್ ಜನರ ಮೆಚ್ಚುಗೆ ಗಳಿಸಿದ ಸಂಸ್ಥೆಯಾಗಿ ಬೆಳೆಯಲಿ ಎಂದು ಹಾರೈಸಿದರು. ಸರ್ವೀಸ್ ಘಟಕವನ್ನು ಉದ್ಘಾಟಿಸಿದ ತುಮಕೂರಿನ ಉದ್ಯಮಿ ಸುರೇಶ್ ಬಿ.ಎಸ್ ಮಾತನಾಡಿ ನೂತನವಾಗಿ ಶುಭಾರಂಭಗೊಂಡ ಭಾರತ್ ವೆಹಿಕಲ್ ಬಜಾರ್ ಯಶಸ್ವಿಯಾಗಿ ಮುನ್ನಡೆಯಲಿ ಎಂದು ಹಾರೈಸಿದರು. ನೆಟ್ಲಮುಡ್ನೂರು ಗ್ರಾ.ಪಂ ಅಧ್ಯಕ್ಷೆ ಸಮಿತಾ ಡಿ ಪೂಜಾರಿ ಮಾತನಾಡಿ ಸೇವೆ, ವಿಶ್ವಾಸ, ವ್ಯವಹಾರ ಇದು ಉತ್ತಮವಾಗಿದ್ದಾಗ ಯಾವುದೇ ಸಂಸ್ಥೆ ಅಭಿವೃದ್ಧಿ ಹೊಂದುತ್ತದೆ ಎಂದು ಹೇಳಿದರು. ಪತ್ರಕರ್ತ ಲತೀಫ್ ನೇರಳಕಟ್ಟೆ ಮಾತನಾಡಿ ಭಾರತ್ ವೆಹಿಕಲ್ ಬಜಾರ್ ನಮ್ಮ ಗ್ರಾ.ಪಂ ವ್ಯಾಪ್ತಿಯಲ್ಲಿ ಶುಭಾರಂಭಗೊಂಡಿರುವುದು ಅತೀವ ಸಂತಸ ತಂದಿದೆ.
Read More