ತಟ್ಟಿಯಂಗಡಿಯಲ್ಲಿ ಪೈನಾಪಲ್ ಸವಿದ ಸ್ಪೀಕರ್ ಯು ಟಿ ಖಾದರ್
ಪುತ್ತೂರು: ಮಾಣಿ – ಮೈಸೂರು ರಾ. ಹೆದ್ದಾರಿಯ ಕೊಯಿಲತ್ತಡ್ಕದಲ್ಲಿರುವ ತಟ್ಟಿಯಂಗಡಿಯಲ್ಲಿ ಪೈನಾಪಲ್ ತಿನ್ನುವ ಮೂಲಕ ಸಭಾಪತಿ ಯು ಟಿ ಖಾದರ್ ಸಿಂಪ್ಲಿಸಿಟಿ ಮೆರೆದಿದ್ದಾರೆ.
ಕುಂಬ್ರದ ಕರ್ನಾಟಕ ಇಸ್ಲಾಮಿಕ್ ಸೆಂಟರ್ ಗೆ ಭೇಟಿ ನೀಡಿ ವಾಪಸ್ಸಾಗುವ ವೇಳೆ ಕೊಯಿಲತ್ತಡ್ಕದ ಅದ್ದು ಎಂಬವರ ಅಂಗಡಿಗೆ ತೆರಳಿದ ಅವರು ಪೈನಾಪಲ್, ಮಾವು ತಿಂದು ತೆರಳಿದ್ದಾರೆ. ಖಾದರ್ ಅವರು ಬಂದ ಸುದ್ದಿ ತಿಳಿದು ಸ್ಥಳಿಯರು ಜಮಾಯಿಸಿದರು.