ಮುಂಡೂರು: ಕರಿಯಂಡಗೋಳಿ ಅಂಗನವಾಡಿ ಶಿಕ್ಷಕಿಗೆಗೆ ಸನ್ಮಾನ
ಪುತ್ತೂರು: ಮುಂಡೂರು ಗ್ರಾಮದ ಕರಿಯಂಡಗೋಳಿ ಅಂಗನವಾಡಿಯಲ್ಲಿ ಶಿಕ್ಷಕಿಯಾಗಿ ಸುಮಾರು 33 ವರ್ಷ ಸೇವೆ ಸಲ್ಲಿಸಿ ಫೆ.ತಿಂಗಳ ಕೊನೆಯಲ್ಲಿ ನಿವೃತ್ತಿಯಾಗಲಿರುವ ಸುಶೀಲ ಕೆ ಓಟೆತ್ತಿಮಾರ್ ಅವರಿಗೆ ಕುರಿಯ ಆಟೋ ಚಾಲಕ ಮಾಲಕರ ಸಂಘದ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು. ಅಂಗನಾಡಿಯ ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಆಶಾಲತಾ ಅಧ್ಯಕ್ಷತೆ ವಹಿಸಿದ್ದರು.

ಸುಶೀಲ ಕೆ ಅವರನ್ನು ಸನ್ಮಾನಿಸಿದ ಕುರಿಯ ಆಟೋ ಚಾಲಕ ಮಾಲಕರ ಸಂಘದ ಗೌರವಾಧ್ಯಕ್ಷ ಬೂಡಿಯಾರ್ ಪುರುಷೋತ್ತಮ ರೈ ಮಾತನಾಡಿ ಸುಶೀಲ ಅವರು ಅಂಗನವಾಡಿ ಶಿಕ್ಷಕಿಯಾಗಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದು ಎಲ್ಲರ ಪ್ರೀತಿ ಸಂಪಾದಿಸಿದ್ದಾರೆ, ಉತ್ತಮ ಶಿಕ್ಷಕಿಯಾಗಿ ಗುರುತಿಸಿಕೊಂಡಿರುವ ಸುಶೀಲ ಅವರು ಈ ತಿಂಗಳ ಕೊನೆಯಲ್ಲಿ ಸೇವಾ ನಿವೃತ್ತಿ ಹೊಂದಲಿದ್ದು ಅವರ ನಿವೃತ್ತಿ ಜೀವನ ಸಂತೋಷದಿಂದ ಕೂಡಿರಲಿ ಎಂದು ಹಾರೈಸಿದರು.
ನಿವೃತ್ತ ಮುಖ್ಯಗುರು ಹುಕ್ರ ಹಾಗೂ ಪುತ್ತೂರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿಯ ಮೇಲ್ವಿಚಾರಕಿ ಸುಜಾತ ಎಚ್ ಶುಭ ಹಾರೈಸಿದರು. ವೇದಿಕೆಯಲ್ಲಿ ಕುರಿಯ ಆಟೋ ಚಾಲಕ ಮಾಲಕರ ಸಂಘದ ಅಧ್ಯಕ್ಷ ರಮೇಶ್ ಅಂಚನ್ ಉದಯಗಿರಿ, ಕೋಶಾಧಿಕಾರಿ ಹುಸೈನಾರ್ ಅಜ್ಜಿಕಟ್ಟೆ, ಸದಸ್ಯರಾದ ಮಮ್ಮು ಅಜ್ಜಿಕಟ್ಟೆ, ರವಿ ಉದಯಗಿರಿ, ಇಸಾಕ್ ನಿಧಾ ಕುರಿಯ, ರಝಾಕ್ ಕೊಡಿನೀರ್ ಉಪಸ್ಥಿತರಿದ್ದರು. ಆಟೋ ಚಾಲಕ ಮಾಲಕರ ಸಂಘದ ಕಾರ್ಯದರ್ಶಿ ಅಬ್ದುಲ್ ಜಬ್ಬಾರ್ ಎಂ.ಎಸ್ ಕುರಿಯ ಸ್ವಾಗತಿಸಿದರು. ಸನ್ಮಾನಿತಗೊಂಡ ಸುಶೀಲ ಕೆ ಅವರ ಕಿರು ಪರಿಚಯ ಮಾಡಿದ ನಿಝಾರ್ ಅಜ್ಜಿಕಟ್ಟೆ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಅಂಗನವಾಡಿಯ ಸಹ ಕಾರ್ಯಕರ್ತೆ ಉಮಾವತಿ ಸಹಕರಿಸಿದರು.





