ಕರಾವಳಿ

ಬೆಳ್ತಂಗಡಿ:ಕಾಲೇಜು ವಿದ್ಯಾರ್ಥಿನಿಯ ಕಿಡ್ನಾಪ್ ಪ್ರಕರಣಕ್ಕೆ ತಿರುವು!?

ಬೆಳ್ತಂಗಡಿ : ಕಾಲೇಜು ವಿದ್ಯಾರ್ಥಿನಿಯನ್ನು ಮೂವರು ಕಾರಿನಲ್ಲಿ ಮುಸುಕುಧಾರಿಗಳು ಕಿಡ್ನಾಪ್ ಮಾಡಲು ಪ್ರಯತ್ನಿಸಿ ಚೂರಿಯಿಂದ ಇರಿದು ಪರಾರಿಯಾದ ಘಟನೆ ಫೆ.9ರಂದು ವರದಿಯಾಗಿದ್ದು ಇದೀಗ ಈ ಪ್ರಕರಣ ಅನುಮಾನಗಳನ್ನು ಹುಟ್ಟು ಹಾಕಿದೆ.



ಫೆ.9 ರಂದು ಬೆಳಗ್ಗೆ ಎಂದಿನಂತೆ 16 ವರ್ಷದ ಕಾಲೇಜು ವಿದ್ಯಾರ್ಥಿನಿ 8:30 ಕ್ಕೆ  ಸ್ಕೂಟರ್ ನಲ್ಲಿ ಪ್ರಯಾಣ ಮಾಡುವಾಗ ಓಮಿನಿ ಕಾರಿನಲ್ಲಿ ಬಂದ ಮೂವರು ಕಿಡ್ನಾಪ್ ಮಾಡಲು ಯತ್ನಿಸಿ ಚೂರಿ ಇರಿದು ಪರಾರಿಯಾಗಿದ್ದರು ಎಂದು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಾಗಿ ದೂರು ನೀಡಿದ್ದರು.

ಬೆಳ್ತಂಗಡಿ ಪೊಲೀಸರು ಇಡಿ ದಿನ ಕಾರ್ಯಾಚರಣೆ ನಡೆಸಿದಾಗ ಓಮಿನಿ ಕಾರು ಪತ್ತೆಯಾಗಿರಲಿಲ್ಲ
ಕಾಲೇಜಿಗೆ ಹೋಗಲು ಇಷ್ಟ ಇಲ್ಲದ ಕಾರಣದಿಂದ ಈ ರೀತಿ ಕಥೆ ಕಟ್ಟಿದ್ದಾರೆ ಮತ್ತು ತಾನೇ ಕೈಯನ್ನು ಕುಯ್ದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಹೆಚ್ಚಿನ ಮಾಹಿತಿ ಪೊಲೀಸ್ ತನಿಖೆಯ ಬಳಿಕ ತಿಳಿದು ಬರಬೇಕಾಗಿದೆ.

Leave a Reply

Your email address will not be published. Required fields are marked *

error: Content is protected !!