ಕರಾವಳಿಕ್ರೈಂ

ಬಂಟ್ವಾಳ: ಯುವತಿಗೆ ಲೈಂಗಿಕ ಕಿರುಕುಳ; ಪ್ರಕರಣ ದಾಖಲು



ಬಂಟ್ವಾಳ: ಮನೆಯಲ್ಲಿ ಮಲಗಿರುವ ಯುವತಿಗೆ ಕೋಣೆಯ ಕಿಟಕಿಯ ಮೂಲಕ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ಬಗ್ಗೆ ಯುವತಿ ನೀಡಿದ ದೂರಿನಂತೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಲ್ಲಡ್ಕ ಸಮೀಪದ ಬಾಳ್ತಿಲ ಗ್ರಾಮದ ಕುದ್ರೆಬೆಟ್ಟು ಎಂಬಲ್ಲಿ ಈ ಘಟನೆ ಸೆ.20ರಂದು ರಾತ್ರಿ 10 ಗಂಟೆಯ ಬಳಿಕ ನಡೆದಿದ್ದು, ಸ್ಥಳೀಯ ನಿವಾಸಿ ವಿಶ್ವನಾಥ ಎಂಬಾತ ಮನೆಯ ಕೋಣೆಯ ಕಿಟಕಿಯ ಮೂಲಕ ಲೈಂಗಿಕ ಕಿರುಕುಳ ನೀಡುವ ಉದ್ದೇಶದಿಂದ ಇಣುಕಿ ನೋಡುತ್ತಿದ್ದು, ಇದನ್ನು ಗಮನಿಸಿ ದೂರುದಾರರು ಜೋರಾಗಿ ಕಿರುಚಿದಾಗ ಅಲ್ಲಿಂದ ಓಡಿ ಹೋಗಿದ್ದಾನೆ ಎಂದು ದೂರಲಾಗಿದೆ.

Leave a Reply

Your email address will not be published. Required fields are marked *

error: Content is protected !!