ಕರಾವಳಿ

ನ.24 ಮತ್ತು 25ರಂದು ಪೈಚಾರ್ ನಲ್ಲಿ ರಾಜ್ಯ ಮಟ್ಟದ ದಫ್ ಸ್ಪರ್ಧೆ, ಅಲ್ ಅಮೀನ್ ಯೂತ್ ಸೆಂಟರ್ ಕಛೇರಿ ಉದ್ಘಾಟನೆ: ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಗೆ ಆಹ್ವಾನ



ಸುಳ್ಯ: ಪೈಚಾರು ಅಲ್ ಅಮೀನ್ ಯೂತ್ ಸೆಂಟರ್ ವತಿಯಿಂದ 18 ನೇ ವಾರ್ಷಿಕ ಸ್ವಲಾತ್ ವಾರ್ಷಿಕ ಅಂಗವಾಗಿ ರಾಜ್ಯ ಮಟ್ಟದ ದಫ್‌ ಸ್ಪರ್ಧೆ ಹಾಗೂ ಯೂತ್ ಸೆಂಟರ್‌ನ ನೂತನ ಕಛೇರಿ ಉದ್ಘಾಟನೆ ನ.24 ಮತ್ತು 25 ರಂದು ಪೈಚಾರ್ ಬದ್ರಿಯಾ ಜುಮಾ ಮಸೀದಿ ವಠಾರದಲ್ಲಿ ನಡೆಯಲಿದೆ.

ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕೇರಳ ಮಂಜೇಶ್ವರದ ಶಾಸಕ ಎ ಕೆ ಎಂ ಅಶ್ರಫ್ ರವರು ಭಾಗವಹಿಸಲಿದ್ದು ಸಂಘಟನೆಯ ಮುಖಂಡರು ಶಾಸಕರ ನಿವಾಸಕ್ಕೆ ತೆರಳಿ ಶಾಸಕರಿಗೆ ಅಹ್ವಾನ ನೀಡಿ ಸ್ವಾಗತಿಸಿದರು.

ನ.24 ರಂದು ಸಂಜೆ 4.30 ಕ್ಕೆ ಮೊಗರ್ಪಣೆ ಮಸೀದಿ ವಠಾರದಿಂದ ಪೈಚಾರ್ ತನಕ ಆಕರ್ಷಕ ದಫ್ ಮೆರವಣಿಗೆ ನಡೆಯಲಿದ್ದು ಮೆರವಣಿಗೆಯಲ್ಲಿ ಸ್ಥಳೀಯ 8 ತಂಡಗಳಿಂದ ದಫ್ ಪ್ರದರ್ಶನ ನಡೆಯಲಿದೆ.

ಸಂಜೆ 5ಕ್ಕೆ ಅಲ್ ಅಮೀನ್ ಯೂತ್ ಸೆಂಟರ್‌ನ ನೂತನ ಕಚೇರಿಯ ಉದ್ಘಾಟನೆ ನಡೆಯಲಿದ್ದು ಬಳಿಕ ಸಂಜೆ 7 ರಿಂದ ಸಭಾ ಕಾರ್ಯಕ್ರಮ ನಡೆಯಲಿದೆ. ವೇದಿಕೆಯಲ್ಲಿ ಮಂಜೇಶ್ವರ ಶಾಸಕರಾದ ಎ.ಕೆ.ಎಂ ಅಶ್ರಫ್, ಜಿ.ಪಂ ಮಾಜಿ ಉಪಾಧ್ಯಕ್ಷ ಎಂ.ಎಸ್.ಮಹಮ್ಮದ್ ಸೇರಿದಂತೆ ಧಾರ್ಮಿಕ, ಸಾಮಾಜಿಕ,ರಾಜಕೀಯ ಕ್ಷೇತ್ರದ ಮುಖಂಡರು ಭಾಗವಹಿಸಲಿದ್ದಾರೆ.

ರಾತ್ರಿ 9 ರಿಂದ ರಾಜ್ಯ ಮಟ್ಟದ ದಫ್ ಸ್ಪರ್ಧೆ ನಡೆಯಲಿದ್ದು ರಾಜ್ಯದ ಪ್ರಮುಖ12 ದಫ್ ತಂಡಗಳು ಭಾಗವಹಿಸಲಿದೆ. ನ.25ರಂದು ಸಂಜೆ 7ರಿಂದ ಸಯ್ಯದ್ ಜಸೀಲ್ ಶಾಮಿಲ್ ಇರ್ಫಾನಿ ತಂಗಳ್ ಕೋಲಪ್ಪುರಂ ಕೇರಳ ಅವರ ನೇತೃತ್ವದಲ್ಲಿ ವಾರ್ಷಿಕ ಸ್ವಲಾತ್ ಕಾರ್ಯಕ್ರಮ ನಡೆಯಲಿದೆ. ಪೈಚಾರ್ ಬಿ ಜೆ ಎಂ ಖತೀಬರಾದ ಶಮೀರ್ ಅಹ್ಮದ್ ನ‌ಈಮಿ ಮುಖ್ಯ ಪ್ರಭಾಷಣ‌‌ ಮಾಡಲಿರುವರು.

ಅಲ್ ಅಮೀನ್ ಯೂತ್ ಸೆಂಟರ್‌ನ ಅಧ್ಯಕ್ಷ ಸತ್ತಾರ್ ಉಪಾಧ್ಯಕ್ಷ ಹನೀಫ್ ಆಲ್ಫಾ, ಪ್ರಧಾನ ಕಾರ್ಯದರ್ಶಿ ಅಬೂಸಾಲಿ, ಸದಸ್ಯರಾದ ಮುಜೀಬ್ ಪೈಚಾರ್, ಸದಸ್ಯರಾದ ಕರೀಂ ಕೆ.ಎಂ, ಪೈಚಾರ್ ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಆರ್.ಬಿ ಬಶೀರ್ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!