ನನ್ನ ಹೆಲ್ಮೆಟ್ ಕಳ್ಳತನವಾಗಿದೆ… ಹುಡುಕಿಕೊಡಿ: ಬೈಕ್ ಸವಾರನಿಂದ ಪೊಲೀಸ್ ಠಾಣೆಗೆ ದೂರು
ನನ್ನ ಹೆಲ್ಮೆಟ್ ಕಳ್ಳತನವಾಗಿದೆ ಹುಡುಕಿಕೊಡಿ ಎಂದು ಬೆಂಗಳೂರಿನ ಗಿರಿನಗರ ಪೊಲೀಸ್ ಠಾಣೆಗೆ ವ್ಯಕ್ತಿಯೋರ್ವರು ದೂರು ನೀಡಿದ ಘಟನೆ ನಡೆದಿದೆ. ಬೈಕ್ ಸವಾರ ದೂರು ನೀಡಿದವರು.

ದ್ವಾರಕಾನಗರದ ಜಯದುರ್ಗ ಬೇಕರಿಗೆ ತೆರಳಿದ್ದರು. ಈ ವೇಳೆ ಬೇಕರಿಯ ಟೇಬಲ್ ಮೇಲೆ 10 ಸಾವಿರ ಮೌಲ್ಯದ ಹೆಲ್ಮೆಟ್ ಇಟ್ಟಿದ್ದಾರೆ. ಬಳಿಕ ಜ್ಯೂಸ್ ಕುಡಿದು ಹೆಲ್ಮೆಟ್ ಮರೆತು ಸ್ವಲ್ಪ ದೂರ ಹೋದ ಮೇಲೆ ಮರೆತಿರುವುದು ಅರಿವಿಗೆ ಬಂದಿದೆ. ವಾಪಸ್ ಬೇಕರಿಗೆ ಬಂದು ನೋಡುವಷ್ಟರಲ್ಲಿ ಹೆಲ್ಮೆಟ್ ಕಳುವಾಗಿದೆ ಎಂದು ದೂರು ನೀಡಿದ್ದಾರೆ.
ಬೈಕ್ ಸವಾರ ನೀಡಿದ ದೂರಿನ ಮೇರೆಗೆ ಗಿರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ. ಬೇಕರಿಯ ಸಿಸಿಕ್ಯಾಮರಾ ದೃಶ್ಯ ಆಧರಿಸಿ ಹೆಲ್ಮೆಟ್ ಪತ್ತೆಗೆ ಪೊಲೀಸರು ಕಾರ್ಯ ಆರಂಭಿಸಿದ್ದಾರೆ.