ಶೇಖಮಲೆ: ಕೃಷಿಕ ಮುಹಮ್ಮದ್ ಹೃದಯಾಘಾತದಿಂದ ನಿಧನ
ಕುಂಬ್ರ: ಶೇಖಮಲೆಯ ಸಮೀಪದ ಅರಿಯಡ್ಕ ಜಮಾಅತ್ ಗೆ ಒಳಪಟ್ಟ ದರ್ಖಾಸ್ ನಿವಾಸಿ ಮುಹಮ್ಮದ್ (83. ವ) ಹೃದಯಾಘಾತದಿಂದ ನಿಧನರಾದರು.

ವೃತ್ತಿಯಲ್ಲಿ ಕೃಷಿಕರಾಗಿದ್ದ ಇವರು ಇಂದು ಬೆಳಿಗ್ಗೆ ಸ್ವಗೃಹದಲ್ಲಿ ಬೆಳಗಿನ ಜಾವ ಎಂಟು ಗಂಟೆಗೆ ಹೃದಯಾಘಾತದಿಂದ ನಿಧನರಾದರು ಎಂದು ತಿಳಿದು ಬಂದಿದೆ.
ಮಹಮ್ಮದ್‌ರವರು ಪತ್ನಿ ಮತ್ತು ಪುತ್ರರಾದ ಎ.ಆರ್ ಅಬ್ದುಲ್ ರಹಿಮಾನ್, ಎ.ಆರ್.ಇಬ್ರಾಹಿಂ ಮತ್ತು ಎ.ಆರ್. ಸಂಶುದ್ದೀನ್ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.