ಕರಾವಳಿರಾಜಕೀಯ

ಗುರುಪುರ ಗ್ರಾಮ ಪಂಚಾಯತ್ ಅಧಿಕಾರ SDPI ಪಾಲು: ಅಧ್ಯಕ್ಷರಾಗಿ ಸಫಾರ ನಾಸೀರ್ ಆಯ್ಕೆ



ಮಂಗಳೂರು ತಾಲೂಕಿನ ಪ್ರತಿಷ್ಠಿತ ಗುರುಪುರ ಗ್ರಾಮ ಪಂಚಾಯತ್ ಅಧಿಕಾರ SDPI ಪಕ್ಷದ ಪಾಲಾಗಿದೆ. ಗುರುಪುರ ಗ್ರಾಮ ಪಂಚಾಯತ್ ಎರಡನೇ ಅವಧಿಗೆ ಅಧ್ಯಕ್ಷರಾಗಿ ಎಸ್.ಡಿ.ಪಿನಐ ಬೆಂಬಲಿತ ಅಭ್ಯರ್ಥಿ ಸಫಾರ ನಾಸೀರ್ ಆಯ್ಕೆಯಾಗಿದ್ದಾರೆ. ಉಪಧ್ಯಾಕ್ಷರಾಗಿ ಪಕ್ಷೇತರ ಅಭ್ಯರ್ಥಿ ದಾವೂದ್ ಆಯ್ಕೆಯಾದರು.


ಗುರುಪುರ ಗ್ರಾಮ ಪಂಚಾಯತ್ ಒಟ್ಟು 28 ಸ್ಥಾನಗಳಲ್ಲಿ SDPI ಬೆಂಬಲಿತ 10 ಸದಸ್ಯರಿದ್ದಾರೆ. ಕಾಂಗ್ರೆಸ್ ಬೆಂಬಲಿತ 11 ಸದಸ್ಯರಲ್ಲಿ 2 ಮಂದಿ ಸದಸ್ಯರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರಿಂದ ಬಿಜೆಪಿ ಸದಸ್ಯರು ಸಂಖ್ಯೆ 8 ಕ್ಕೆ ಏರಿದೆ. ಒರ್ವ ಪಕ್ಷೇತರ ಸದಸ್ಯರಿದ್ದಾರೆ. ಇಂದು ನಡೆದ ಚುನಾವಣೆಯಲ್ಲಿ ಒರ್ವ ಪಕ್ಷೇತರ ಅಭ್ಯರ್ಥಿಯ ಬೆಂಬಲದೊಂದಿಗೆ SDPI ಪಕ್ಷ ಅಧಿಕಾರ ಹಿಡಿದಿದೆ.


ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ SDPI ಬೆಂಬಲಿತ ಅಭ್ಯರ್ಥಿ ಸಫಾರ 11 ಮತಗಳು ಪಡೆದರೆ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಶೋಭಾ ಅವರು 9 ಮತಗಳು ಪಡೆದರು.
ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ದಾವೂದ್ 11 ಮತಗಳು ಪಡೆದರೆ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಎ.ಕೆ.ಅಶ್ರಫ್ 9 ಮತಗಳು ಪಡೆದರು. ಬಿಜೆಪಿ ಬೆಂಬಲಿತ ಸದಸ್ಯರು ಚುನಾವಣಾ ಪ್ರಕ್ರಿಯೆಯಲ್ಲಿ ಗೈರುಹಾಜರಾಗಿದ್ದರು.

Leave a Reply

Your email address will not be published. Required fields are marked *

error: Content is protected !!