ಸುಳ್ಯ ಬ್ಲಾಕ್ ಕಾಂಗ್ರೆಸ್ ಶಕ್ತಿ ಯೋಜನೆ ಉದ್ಘಾಟನಾ ಸಂಭ್ರಮಾಚರಣೆಯಲ್ಲಿ ನಾಯಕರ ನಡುವೆ ವಾಗ್ವಾದ
ಸುಳ್ಯ: ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ಶಕ್ತಿ ಯೋಜನೆಯ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಇಬ್ಬರು ನಾಯಕರ ನಡುವೆ ವಾಗ್ವಾದ ನಡೆದ ಘಟನೆ ವರದಿಯಾಗಿದೆ.

ಬ್ಲಾಕ್ ಕಾಂಗ್ರೆಸ್ ಸಮಿತಿ ಸುಳ್ಯ ಬಸ್ಸು ನಿಲ್ದಾಣದ ಮುಂಭಾಗ ಆಯೋಜಿಸಿದ ಹಿಂದಿನ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಕೆಪಿಸಿಸಿ ನಾಯಕರಾದ ವೆಂಕಪ್ಪ ಗೌಡರು ಆಗಮಿಸುತ್ತಿದ್ದಂತೆ ಕಾರ್ಯಕ್ರಮ ಪ್ರಾರಂಭಿಸಲು ಆರಂಭಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಚುಣಾವಣಾ ಪ್ರಚಾರ ಸಮಿತಿ ಅಧ್ಯಕ್ಷರಾದ ಸದಾನಂದ ಮಾವಜಿ ಆ ಸಂದರ್ಭದಲ್ಲಿ ಸಮಯ ಆಗಿಲ್ಲಾ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಯುವ ಕಾಂಗ್ರೆಸ್ ಅಧ್ಯಕ್ಷರಾದ ಶಾಹುಲ್ ಹಮೀದ್ ಮಧ್ಯೆ ವಾಕ್ಸಮರ ಆರಂಭವಾಯಿತು. ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷರಾದ ಪಿಸಿ ಜಯರಾಮ ಮಧ್ಯ ಪ್ರವೇಶಿಸಿ ಶಾಂತಿಯಿಂದ ಇರುವಂತೆ ಹಾಗೂ ಕಾರ್ಯಕ್ರಮ ಯಶಸ್ವಿಗೊಳಿಸುವ ಕುರಿತು ಮಾತಾನಾಡಿ ಇಬ್ಬರು ನಾಯಕರನ್ನು ಸಮಧಾನಪಡಿಸಿದ ಪ್ರಸಂಗ ನಡೆಯಿತು..