ಶಿಕ್ಷಕ ವರ್ಗಾವಣೆ: ಕಣ್ಣೀರಿನೊಂದಿಗೆ ವಿದಾಯ ಹೇಳಿದ ಮಕ್ಕಳು
ಶಾಲಾ ಶಿಕ್ಷಕರೋರ್ವರಿಗಾಗಿ ವಿದ್ಯಾರ್ಥಿಗಳು ಕಣ್ಣೀರು ಹಾಕಿದ್ದಾರೆ. ನೀವು ನಮ್ಮ ಶಾಲೆಯಿಂದ ಹೋಗಬೇಡಿ ಎಂದು ಅತ್ತಿದ್ದಾರೆ. ವಿದ್ಯಾರ್ಥಿಗಳ ಪ್ರೀತಿ ಕಂಡು ಶಿಕ್ಷಕ ಮೂಕ ಪ್ರೇಕ್ಷಕರಾದರು. ಶಾಲೆಯಿಂದ ಚಿತ್ರಕಲಾ ಶಿಕ್ಷಕನಿಗೆ ಮಕ್ಕಳು ಭಾವಪೂರ್ವವಾಗಿ ಬೀಳ್ಕೊಡುಗೆ ಕೊಟ್ಟ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳದ ತಾಲೂಕಿನ ಸಂಸೆ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದಿದೆ.

ಚಿತ್ರಕಲಾ ಶಿಕ್ಷಕ ಸಲೀಂ ಜಾವೇದ್ ಅವರು ಕಳೆದ 12 ವರ್ಷಗಳಿಂದ ಸಂಸೆ ಪ್ರೌಢ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಇತ್ತೀಚೆಗೆ ಅವರನ್ನು ಎನ್.ಆರ್. ಪುರ ತಾಲೂಕಿನ ಮಾಗುಂಡಿ ಗ್ರಾಮಕ್ಕೆ ವರ್ಗಾವಣೆ ಮಾಡಲಾಗಿತ್ತು. ವರ್ಗಾವಣೆಗೊಂಡ ಶಿಕ್ಷಕನಿಗೆ ಮಕ್ಕಳು ಕಣ್ಣೀರ ವಿದಾಯ ಹೇಳಿದ್ದಾರೆ.
ಸಲೀಂ ಜಾವೇದ್ ಅವರ ಕಾಲು ಮುಟ್ಟಿ ನಮಸ್ಕರಿಸಿದರು. ಶಿಕ್ಷಕರ ವರ್ಗಾವಣೆಗೆ ನೊಂದು ಮಕ್ಕಳು ಕಣ್ಣೀರಿಟ್ಟರೆ, ಮಕ್ಕಳ ಜೊತೆ ಇತರೆ ಶಿಕ್ಷಕರು ಕೂಡಾ ಬೇಸರದಿಂದ ಕಣ್ಣೀರು ಹಾಕಿದ್ದಾರೆ.