ಕರಾವಳಿ

ಕಾರಂದೂರು ಮರ್ಕಝ್ ಕರ್ನಾಟಕ ವಿದ್ಯಾರ್ಥಿ ಸಂಘಟನೆಗೆ ನೂತನ ಪದಾಧಿಕಾರಿಗಳ ಆಯ್ಕೆ

ವಿದ್ಯಾರ್ಥಿ ಸಂಘಟನೆಗಳ ಕಾರ್ಯಾಚರಣೆಯು ಇಸ್ಲಾಮಿನ ಸಂದೇಶ ಜಗತ್ತಿಗೆ ಸಾರುವಂತೆ ಇರಬೇಕೇಂದು ಮರ್ಕಝ್ ಮುದರ್ರಿಸರಾದ ಉಸ್ತಾದ್ ವಿ.ಪಿ.ಎಂ ಫೈಝಿ ವಿಲ್ಯಾಪಳ್ಳಿ ಹೇಳಿದರು. ಮೂರು ದಶಕಗಳ ಹಿನ್ನಲೆಯಿರುವ ಮರ್ಕಝ್ ಕನ್ನಡಿಗಳ ಒಕ್ಕೂಟ ಕೆ.ಎಸ್.ಒ ಇದರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಸಂಘಟನೆಯ ಅಧ್ಯಕ್ಷರಾದ ಸಯ್ಯಿದ್ ಅಝ್ಹರುದ್ದೀನ್ ಕಾರ್ಯಕ್ರಮ ಉದ್ಘಾಟಿಸಿದರು.


ಕೆ.ಎಸ್.ಒ ನಡೆದು ಬಂದ ರೀತಿ ಹಾಗೂ ಸಂಘಟನೆಯ ಕಾರ್ಯಾಚರಣೆಗಳ ಕುರಿತಾಗಿ ನಾಯಕರುಗಳು ವಿವರಣೆ ನೀಡಿದರು. ಕಳೆದ ಅಧ್ಯಯನ ವರ್ಷದ ವರದಿ ಹಾಗೂ ಲೆಕ್ಕ ಮಂಡನೆಯನ್ನು ಕೆ.ಎಸ್.ಒ ಪ್ರಧಾನ ಕಾರ್ಯದರ್ಶಿ ಬಶೀರ್ ಸಖಾಫಿ ಬೈತಡ್ಕ ನೆರವೇರಿಸಿದರು. ವಿಲ್ಯಾಪಳ್ಳಿ ಉಸ್ತಾದರ ನೇತೃತ್ವದಲ್ಲಿ ಹೊಸ ಸಮಿತಿಯ ಘೋಷಿಸಲಾಯಿತು.

ಅಧ್ಯಕ್ಷರಾಗಿ ನೌಶಾದ್ ಕೊಕ್ಕಡ, ಪ್ರ.ಕಾರ್ಯದರ್ಶಿಯಾಗಿ ಸಿದ್ದೀಕ್ ಕುಕ್ಕಾಜೆ, ಕೋಶಾಧಿಕಾರಿಯಾಗಿ ಸಿದ್ದೀಕ್ ಸೆರ್ಕಳ ಆಯ್ಕೆಯಾದರು. ಉಪಾಧ್ಯಕ್ಷರುಗಳಾಗಿ ಸಯ್ಯಿದ್ ಅಲವಿ ಫಝಲ್ ಉಲ್ತೂರು, ರಾಫಿ ಹಿಮಮಿ ಸಖಾಫಿ ಕೊಡಗು, ಅನ್ಸಾರ್ ಕಾಟಿಪ್ಪಳ್ಳ, ಕಾರ್ಯದರ್ಶಿಗಳಾಗಿ ಅಶ್ಫಾಖ್ ಉಪ್ಪಳ್ಳಿ, ಅಮ್ಮಾರ್ ನೀರಕಟ್ಟೆ, ಸ್ವಲಾಹುದ್ದೀನ್ ಕುತ್ತಾರು ಆಯ್ಕೆಯಾದರು. ಸಲೀಮ್ ಸಖಾಫಿ ಭದ್ರಾವತಿ, ಫಾರೂಖ್ ಸಖಾಫಿ ಕಡಬ, ಸಯ್ಯಿದ್ ಅಹ್ಮದ್ ಜಮಲುಲ್ಲೈಲಿ, ಶರಫುದ್ದೀನ್ ಅಂಡೋಣ ಮುಂತಾದವರು ಉಪಸ್ಥಿತರಿದ್ದರು. ಆಶಿಖ್ ಹೆಚ್ ಕಲ್ಲು ಸ್ವಾಗತಿಸಿದರು. ಸಿದ್ದೀಕ್ ಕುಕ್ಕಾಜೆ ವಂದಿಸಿದರು

Leave a Reply

Your email address will not be published. Required fields are marked *

error: Content is protected !!