ಅಂತಾರಾಷ್ಟ್ರೀಯಕರಾವಳಿ

ರಂಝಾನ್: ಸತ್ಕರ್ಮಗಳ ಮೂಲಕ ಮನಸ್ಸು, ಹೃದಯ ಶುದ್ದಿಗೊಳ್ಳಲಿ

ವಿಶುದ್ದ ರಂಝಾನ್ ತಿಂಗಳು ಮತ್ತೊಮ್ಮೆ ಆಗಮನವಾಗಿದೆ.
ಪವಿತ್ರ ಖುರ್ ಆನ್ ಅವತೀರ್ಣಗೊಂಡಿರುವ ಮಾಸವೂ ಆಗಿರುವ ರಂಜಾನ್ ತಿಂಗಳು ಸತ್ಕರ್ಮಗಳ ಮೂಲಕ ನಮ್ಮ ಹೃದಯವನ್ನು ಶುದ್ದಿಗೊಳಿಸಲು ನಮಗೆ ಸಿಕ್ಕಿರುವ ಅಪೂರ್ವ ಅವಕಾಶವಾಗಿದ್ದು ಇದು ಪ್ರಾಯಶ್ಚಿತಪಟ್ಟು ಅಲ್ಲಾಹನಲ್ಲಿ ಕ್ಷಮೆಯನ್ನು ಕೋರುತ್ತಾ ನಮ್ಮನ್ನು ನಾವು ಪರಿಶುದ್ದತೆಯೆಡೆಗೆ ಕೊಂಡೊಯ್ಯುವ ಸಮಯವಾಗಿದೆ.


ರಂಜಾನ್‌ ತಿಂಗಳಿನಲ್ಲಿ ನಮ್ಮ ಮನಸ್ಸು ಮತ್ತು ಹೃದಯವನ್ನು ಶುದ್ದೀಕರಿಸುವುದಕ್ಕಾಗಿ ಹೆಚ್ಚು ಇಬಾದತ್ ಮಾಡಬೇಕು. ನಮಾಜ್, ಖುರ್ ಆನ್ ಪಾರಾಯಣ, ದಿಕ್ರ್, ಸ್ವಲಾತ್, ಸತ್ಕರ್ಮಗಳನ್ನು ಅಧಿಕಗೊಳಿಸಬೇಕು. ಒಳಿತಿಗೆ ದುಪ್ಪಟ್ಟು ಪ್ರತಿಫಲ ಸಿಗುವ ಈ ಮಾಸದ ಸಂಪೂರ್ಣ ಲಾಭವನ್ನು ನಾವು ಪಡೆಯದೆ ಹೋದರೆ ನಮಗಿಂತ ನತದೃಷ್ಟರು ಯಾರೂ ಇಲ್ಲ.


ಪುಣ್ಯ ರಂಝಾನ್ ತಿಂಗಳು ನಮ್ಮೆಲ್ಲರ ಹೃದಯಗಳು ಶುದ್ದಿಗೊಳ್ಳಲಿ, ಮನೆ, ಮನಗಳು ಇಬಾದತ್‌ಗಳಿಂದ ಪ್ರಜ್ವಲಿಸಲಿ ಮತ್ತು ನಮ್ಮೆಲ್ಲರ ಜೀವನ ಶಾಂತಿ, ಸಮಾಧಾನದಿಂದ ಕೂಡಿರಲಿ, ನಮ್ಮ ಉಪವಾಸ ಸತ್ಕರ್ಮ ಮತ್ತು ಪ್ರಾರ್ಥನೆಯನ್ನು ಸರ್ವ ಶಕ್ತನಾದ ಅಲ್ಲಾಹು ಸ್ವೀಕರಿಸಿ ನಮ್ಮನ್ನು ಕ್ಷಮಿಸಲಿ, ಅಲ್ಲಾಹನು ಅಸಂಖ್ಯಾತ ಅನುಗ್ರಹಗಳನ್ನು ನಮ್ಮ ಮೇಲೆ ಧಾರೆಯೆರೆಯಲಿ ಎಂದು ಪ್ರಾರ್ಥಿಸುತ್ತಾ… ಸರ್ವರಿಗೂ ರಂಝಾನ್ ಮುಬಾರಕ್

-ಅಮ್ಮದ್ ಖಾನ್ ಪೋಳ್ಯ
ದಮ್ಮಾಮ್, ಸೌದಿ ಅರೇಬಿಯಾ

Leave a Reply

Your email address will not be published. Required fields are marked *

error: Content is protected !!