ಕರಾವಳಿ

ಸಾಲ್ಮರ ದಾರುಲ್ ಹಸನಿಯಾ ಅಕಾಡೆಮಿಯಲ್ಲಿ ಖುರ್ ಆನ್ ಕಂಠಪಾಠ ಮುಗಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ

ಪುತ್ತೂರು : ಸಾಲ್ಮರ ದಾರುಲ್ ಹಸನಿಯಾ ಅಕಾಡೆಮಿಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಪವಿತ್ರ ಖುರ್ ಆನ್ ಕಂಠಪಾಠ ( ಹಿಫ್ಲುಲ್ ಖುರ್ ಆನ್) ಮುಗಿಸಿದ ಮೂವರು ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ವು ಸಂಸ್ಥೆಯ ಸಭಾಂಗಣದಲ್ಲಿ ಜರಗಿತು.


 ಸಂಸ್ಥೆಯ ವಿದ್ಯಾರ್ಥಿಗಳಾದ ಮುಹಮ್ಮದ್ ಸಿನಾನ್ ಚಿಕ್ಕಮಗಳೂರು, ಮುಹಮ್ಮದ್ ಉವೈಸ್ ಚಿಕ್ಕಮಗಳೂರು, ಸೈಫುದ್ದೀನ್ ಪರ್ಪುಂಜ ಅವರನ್ನು ಶಾಲು ಹೊದಿಸಿ,ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಸನ್ ಹಾಜಿ ಸಿಟಿ ಬಝಾರ್ ಅವರು ವಹಿಸಿದ್ದರು. ಸಯ್ಯಿದ್ ಯಹ್ಯಾ ತಂಙಳ್ ಪ್ರಾರ್ಥನೆಗೆ ನೇತೃತ್ವ ನೀಡಿದರು.


ಸಮಾರಂಭದಲ್ಲಿ ಹಾಫಿಳ್ ಝಿಯಾದ್ ಖಾಸಿಮಿ ಕೊಲ್ಲಂ, ಹಾಫಿಳ್ ಮಹರೂಫ್,ಹಾಫಿಳ್ ಅಬ್ದುಲ್ ಮನ್ನಾನ್, ಅಬ್ದುಲ್ ಲತೀಫ್ ಫೈಝಿ ಕುಪ್ಪೆಟ್ಟಿ,ಶಾಹಿರ್ ಯಮಾನಿ,ಅಬ್ದುಲ್ ರಝಾಕ್ ಖಾಸಿಮಿ ಮೈದಾನಿಮೂಲೆ, ಶಾಕಿರ್ ಮುಸ್ಲಿಯಾರ್, ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಕಮಿಟಿ ಅಧ್ಯಕ್ಷ ಹಾಜಿ ಅಬ್ದುಲ್‌ ರಹಿಮಾನ್ ಅಝಾದ್,ಬಡಕೋಡಿ ಜಮಾಅತ್ ಕಮಿಟಿ ಅಧ್ಯಕ್ಷ ಉಮರ್ ಸಂಪ್ಯ,ಬಶೀರ್ ಹಾಜಿ ದರ್ಬೆ,ರಿಯಾಝ್ ಇಂಜಿನಿಯರ್, ಅಬ್ದುಲ್ ರಹಿಮಾನ್ ಹಾಜಿ ಬಾಳಾಯ,ಉಮರ್ ರೋಯಲ್ ಮುಕ್ವೆ,ಅಲಿ ಚಿಕ್ಕಮಗಳೂರು, ಉಸ್ಮಾನ್ ಚಿಕ್ಕಮಗಳೂರು, ಮುಹಮ್ಮದ್ ಪರ್ಪುಂಜ, ಅಬ್ದುಲ್ ರಹಿಮಾನ್ ಹಾಜಿ ಆರ್.ಟಿ.ಒ, ಮುಹಮ್ಮದ್ ಝಹ್ರಾನ್, ರಫೀಕ್ ಪರ್ಲಡ್ಕ, ಅಬ್ದುಲ್ಲಾ ಹಾಜಿ ಬಾಳಿಲಾ, ಅಬ್ದುಲ್ ಲತೀಫ್ ಕೊಡಿಪ್ಪಾಡಿ, ಆರ್.ಪಿ.ಅಬ್ದುಲ್ ರಝಾಕ್ ಪಡೀಲ್ ಮೊದಲಾದವರು ಉಪಸ್ಥಿತರಿದ್ದರು.


ಸಂಸ್ಥೆಯ ವ್ಯವಸ್ಥಾಪಕ ಅನ್ವರ್ ಮುಸ್ಲಿಯಾರ್ ಮೊಟ್ಟೆತ್ತಡ್ಕ ಸ್ವಾಗತಿಸಿ ವಂದಿಸಿದರು. ಕಳೆದ ಆರು ವರ್ಷಗಳ ಹಿಂದೆ ಆರಂಭಿಸಲಾದ ದಾರುಲ್ ಹಸನಿಯಾ ಹಿಫ್ಲುಲ್ ಖುರ್ ಆನ್ ಕಾಲೇಜ್ ನಲ್ಲಿ ಈಗಾಗಲೇ ಮೂವತ್ತು ವಿದ್ಯಾರ್ಥಿಗಳು ಕುರ್ ಆನ್ ಕಂಠಪಾಠ ಮುಗಿಸಿದ್ದು ,ಸದ್ಯ ಅರುವತ್ತು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಮುಂದಿನ ಶೈಕ್ಷಣಿಕ ವರ್ಷದಿಂದ  ‘ಸಮಸ್ತ’ದ ಅಧೀನದ ಎಸ್.ಎನ್.ಇ.ಸಿ. ಪಠ್ಯಕ್ರಮದಲ್ಲಿ ಕಾಲೇಜ್ ತರಗತಿ ಆರಂಭಿಸಲಾಗುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ .

Leave a Reply

Your email address will not be published. Required fields are marked *

error: Content is protected !!