ಅರ್ತಿಕೆರೆ ಅಬ್ದುಲ್ ರಹಮಾನ್ ಹಾಜಿ ನಿಧನಕ್ಕೆ ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಸಮಿತಿ ಸಂತಾಪ
ಹಿರಿಯ ಉಮಾರ ನೇತಾರ ಹಾಗೂ ಮಾಜಿ ತಾಲ್ಲೂಕು ಪಂಚಾಯತ್ ಸದಸ್ಯ ಆರ್ತಿಕೆರೆ ಅಬ್ದುಲ್ ರಹಿಮಾನ್ ಹಾಜಿ ರವರು ಹೃದಯಾಘಾತದಿಂದ ನಿಧನರಾಗಿದ್ದು ಅವರ ನಿಧನಕ್ಕೆ ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಇಬ್ರಾಹಿಂ ಸಾಗರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಹಲವಾರು ಮಸೀದಿಗಳ ಅಧ್ಯಕ್ಷರಾಗಿ, ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಇವರು ಕೊಡುಗೈ ದಾನಿಯಾಗಿದ್ದರು
ಇವರ ಅಗಲುವಿಕೆಯು ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ.
ಮೃತರ ಪಾರತ್ರಿಕ ಲೋಕವನ್ನು ಅಲ್ಲಾಹನು ಯಶಸ್ಸುಗೊಳಿಸಲಿ,ಕುಟುಂಬಕ್ಕೆ ಮತ್ತು ಬಂದು ಬಳಗಕ್ಕೆ ಇವರ ಅಕಾಲಿಕ ಅಗಲುವಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಅವರು ತಮ್ಮ ಸಂತಾಪ ಸೂಚಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ