ಕರಾವಳಿ

ಪೇರಡ್ಕ ಜುಮಾ ಮಸೀದಿ ವಾರ್ಷಿಕ ಸ್ವಲಾತ್ ಮಜ್ಲಿಸ್, ನೂರೇ ಅಜ್ಮೀರ್ ಪೋಸ್ಟರ್ ಬಿಡುಗಡೆ



ಸುಳ್ಯ: ಆಧ್ಯಾತ್ಮಿಕವಾದ ಸ್ವಲಾತ್ ಜ್ಲಿಸ್ ಗಳಲ್ಲಿ ನಾವು ಹೆಚ್ಚು ಹೆಚ್ಚು ಪಾಳ್ಗೊಳ್ಳುವ ಮೂಲಕ ಹ್ರದಯವನ್ನು ಶುದ್ದೀಕರಿಸುವ ಕೆಲಸವನ್ನು ಮಾಡಬೇಕು ಎಂದು ಸಯ್ಯದ್ ಝೈನುಲ್ ಆಬಿದೀನ್ ತಂಙಳ್ ದುಗ್ಗಲಡ್ಕ ಹೇಳಿದರು. ಡಿ.4ರಂದು ಪೇರಡ್ಕ ವಲಿಯುಲ್ಲಾಹಿ ದರ್ಗಾ ಶರೀಫ್ ನಲ್ಲಿ ನಡೆದ ವಾರ್ಷಿಕ ಸ್ವಲಾತ್ ಮಜಿಲಿಸ್ ನ ನೇತ್ರತ್ವವನ್ನು ವಹಿಸಿ ಅವರು ಧಾರ್ಮಿಕ ಉಪನ್ಯಾಸ ನೀಡಿದರು.

ಸಮಾರಂಭದ ಉದ್ಘಾಟನೆಯನ್ನು ಅರಂತೋಡು ಬದ್ರಿಯ ಜುಮಾ ಮಸೀದಿಯ ಖತೀಬರಾದ ಅಲ್ ಹಾಜ್ ಇಸಾಕ್ ಬಾಖವಿ ನೆರವೇರಿಸಿದರು. ಮುಖ್ಯ ಪ್ರಭಾಷಕರಾಗಿ ಕಲ್ಲುಗುಂಡಿ ಜುಮಾ ಮಸೀದಿಯ ಖತೀಬರಾದ ನಈಂ ಪೈಝಿ ಆಗಮಿಸಿ ಪರಸ್ಪರ ವೈಮನಸ್ಸಿನಿಂದ ಕೂಡಿದ ಜೀವನ ನಾಶಕ್ಕೆ ದಾರಿಯಾಗಿದ್ದು ಎಲ್ಲರು ಪರಸ್ಪರ ಸೌಹಾರ್ದತೆಯಿಂದ ಬಾಳಬೇಕೆಂದರು.

ಅಧ್ಯಕ್ಷತೆಯನ್ನು ಜಮಾತ್ ಅಧ್ಯಕ್ಷ ಆಲಿಹಾಜಿ ವಹಿಸಿದರು. ಮುಖ್ಯ ಆತಿಥಿಯಾಗಿ ಭಾಗವಹಿಸಿದ ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಪೇರಡ್ಕ ಮುಹಿಯುದ್ದೀನ್ ಜುಮಾ ಮಸೀದಿಯ ಗೌರವಾಧ್ಯಕ್ಷರಾದ ಟಿ.ಎಂ ಶಹೀದ್ ತೆಕ್ಕಿಲ್ ರವರು ಅಡ್ಯಾರ್ ಕಣ್ಣೂರ್ ನಲ್ಲಿ ನಡೆಯುವ ನೂರೇ ಅಜ್ಮೀರ್ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿ ನೂರೇ ಅಜ್ಮೀರ್ ಕಾರ್ಯಕ್ರಮವು ಆಧ್ಯಾತ್ಮ ಸಂಗಮವಾಗಿದ್ದು ಪ್ರತಿಯೊಬ್ಬರ ಹ್ರದಯವನ್ನು ಸೇರಿಕೊಂಡಿದೆ. ಇದ್ದು ಅತ್ಯಂತ ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು. ಪೇರಡ್ಕ ಜಮಾ ಮಸೀದಿಯ ಖತೀಬರಾದ ರಿಯಾಝ್ ಪೈಝಿ ಎಮ್ಮೆಮಾಡು ಸ್ವಾಗತಿಸಿ ಪ್ರಸ್ತಾವನೆಗೈದರು.

ವೇದಿಕೆಯಲ್ಲಿ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ ಹಮೀದ್ ಗೂನಡ್ಕ, ತಾಲೂಕು ಮದರಸ ಮ್ಯಾನೇಜ್ಮೆಂಟ್ ಅಧ್ಯಕ್ಷ ತಾಜ್ ಮಹಮ್ಮದ್, ಸುಳ್ಯ ಎಸ್.ಎಂ.ಎಫ್ ಅಧ್ಯಕ್ಷ ಹಮೀದ್ ಹಾಜಿ, ಅರಂತೋಡು ಜಮಾಅತ್ ಅಧ್ಯಕ್ಷ ಅಶ್ರಫ್ ಗುಂಡಿ, ಸಹಾಯಕ ಅಧ್ಯಾಪಕರಾದ ಹಂಮುಸ್ಲಿಯಾರ್, ನೂರುದ್ದೀನ್ ಮುಸ್ಲಿಯಾರ್ ಪೇರಡ್ಕ, ಗೂನಡ್ಕ ಶಾಖೆಯ ಎಸ್.ಕೆ.ಎಸ್.ಎಸ್.ಎಫ್ ಅಧ್ಯಕ್ಷ ಸಾಜಿದ್ ಅಝ್ಹರಿ, ಮುನೀರ್ ದಾರಿಮಿ ಮೊದಲಾದವರು ಉಪಸ್ಥಿತರಿದ್ದರು. ಜಮಾಅತ್ ಕಾರ್ಯದರ್ಶಿ ಹಾಜಿ ಅಬ್ದುಲ್ ರಜಾಕ್ ತೆಕ್ಕಿಲ್ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!