ಪೊಲೀಸ್ ದೌರ್ಜನ್ಯಕ್ಕೊಳಗಾದ ಕಾರ್ಯಕರ್ತರನ್ನು ನೋಡಲು ಸಂಜೀವ ಮಠಂದೂರು, ಸಂಸದ ಕಟೀಲ್ ಬರಲಿಲ್ಲ ಯಾಕೆ?-ಶ್ರೀಕೃಷ್ಣ ಉಪಾಧ್ಯಾಯ
ಕಾಂಗ್ರೆಸ್‌ಗೆ ಪೈಪೋಟಿ ನೀಡಲು ಅರುಣ್ ಪುತ್ತಿಲರಿಂದ ಮಾತ್ರ ಸಾಧ್ಯ ಎಂದು ಗೊತ್ತಾಗಿದ್ದಿದರಿಂದ ಪುತ್ತಿಲರ ಜೊತೆ ಸೇರಿಕೊಂಡಿದ್ದೆವು
ಪುತ್ತೂರಿಗೆ ಮಾತ್ರ ಸೀಮಿತವಾಗಿದ್ದ ಅರುಣ್ ಕುಮಾರ್ ಪುತ್ತಿಲ ಚುನಾವಣೆಯ ಬಳಿಕ ರಾಜ್ಯವೇ ಗಮನಿಸುವ ಹಾಗೆ ಬೆಳೆದಿದ್ದಾರೆ ಎಂದು ಪುತ್ತಿಲ ಪರಿವಾರದ ಮುಖಂಡ ಶ್ರೀಕೃಷ್ಣ ಉಪಾಧ್ಯಾಯ ಹೇಳಿದ್ದಾರೆ.
ವಿಟ್ಲದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕೇವಲ 20 ದಿನಗಳ ಅವಧಿಯಲ್ಲಿ ಗಣನೀಯ ಮತ ಪಡೆದು ಸ್ವಾಭಿಮಾನವನ್ನು ನಾವು ತೋರಿಸಿದ್ದು ಪುತ್ತೂರಿನಲ್ಲಿ ನಾವು ಅದ್ಭುತ ಟೀಮ್ ವರ್ಕ್ ಮಾಡಿದ್ದೇವೆ. ಪುತ್ತಿಲರ ಹಿಂದಿರುವವರ ಶ್ರಮ ಇದಕ್ಕೆ ಕಾರಣ ಎಂದು ಅವರು ಹೇಳಿದರು.
ಪುತ್ತೂರಿನಲ್ಲಿ ನಾವು ಸೋತರೆ, ಗೆಲ್ಲೋದು ಬಿಜೆಪಿಯಲ್ಲ, ಆಶಾ ತಿಮ್ಮಪ್ಪ ಅಲ್ಲ, ಗೆಲ್ಲೋದು ಅಶೋಕ್ ರೈ, ಇದು ಅಪಾಯ ಎಂದು ಆವತ್ತೇ ಹೇಳಿದ್ದೆವು. ಆದರೆ ರಾಷ್ಟ್ರೀಯ ಪಕ್ಷಕ್ಕೆ ಜನರ ನಾಡಿಮಿಡಿತ ಗೊತ್ತಾಗಿಲ್ಲ ಎಂದರೆ ಅದಕ್ಕೆ ಅರ್ಥವೇನು. ನಮ್ಮ ಲೆಕ್ಕಾಚಾರ ಎಲ್ಲೂ ಸೋತಿಲ್ಲ, ನಮ್ಮ ಲೆಕ್ಕಾಚಾರ ಸರಿಯಾಗಿಯೇ ಇದೆ ಎಂದು ಅವರು ಹೇಳಿದರು.
ನಾವು 8 ಸಮಾವೇಶ ಮಾಡಿದ್ದೇವೆ. ಅದೆಲ್ಲವೂ ಸಂಘಕ್ಕೆ ಪೂರಕವಾದ ಹಿಂದೂ ಸಮಾಜೋತ್ಸವವೇ ಆಗಿತ್ತು. ನಾವು ಯಾರನ್ನೂ ಅವಮಾನಿಸಿಲ್ಲ, ಬಿಜೆಪಿಯ ಹಿರಿಯನ್ನು ಬೈಯಲಿಲ್ಲ ಎಂದು ಅವರು ಹೇಳಿದರು.
ಕಾಂಗ್ರೆಸ್‌ಗೆ ಪೈಪೋಟಿ ನೀಡಲು ಅರುಣ್ ಪುತ್ತಿಲರಿಂದ ಮಾತ್ರ ಸಾಧ್ಯ ಎಂದು ಗೊತ್ತಾಗಿದ್ದಿದರಿಂದ ನಾವು ತುಂಬಾ ಜನ ಪುತ್ತಿಲರ ಜೊತೆ ಸೇರಿಕೊಂಡಿದ್ದೆವು. ಇವತ್ತಿಗೂ ಬಿಜೆಪಿ ದೊಡ್ಡ ದೊಡ್ಡ ಲೀಡರ್‌ಗಳೇ ಒಳಗಿಂದೊಳಗೆ ನಮಗೆ ಸಪೋರ್ಟ್ ಮಾಡ್ತಿದ್ದಾರೆ. ನಮಗೆ ಕಾಲ್ ಮಾಡಿಯೂ ಸಪೋರ್ಟ್ ಮಾಡ್ತಿದ್ದಾರೆ ಎಂದು ಶ್ರೀಕೃಷ್ಣ ಉಪಾಧ್ಯಾಯ ಹೇಳಿದರು.
ಡಿವೈಎಸ್‌ಪಿಯಿಂದ ಪೆಟ್ಟು ತಿಂದ ಕಾರ್ಯಕರ್ತರನ್ನು ನೋಡಲು ಬಿಜೆಪಿಯ ಮಾಜಿ ಶಾಸಕ ಸಂಜೀವ ಮಠಂದೂರು ಬರಲಿಲ್ಲ, ಸಂಸದ ಕಟೀಲ್ ಬರಲಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.y