ದಾಖಲೆ ಇಲ್ಲದ ಧಾರ್ಮಿಕ ಸ್ಥಳಗಳ ದಾಖಲೆ ಸರಿಪಡಿಸಲು ಸರಕಾರಕ್ಕೆ ಮನವಿ ಮಾಡಿದ್ದೇನೆ, ಶೀಘ್ರದಲ್ಲೇ ಆದೇಶ ಬರಲಿದೆ-ಅಶೋಕ್ ರೈ
ಪುತ್ತೂರು: ದಾಖಲೆ ಇಲ್ಲದ ಧಾರ್ಮಿಕ ಸ್ಥಳಗಳ ದಾಖಲೆ ಸರಿಪಡಿಸಲು ಸರಕಾರಕ್ಕೆ ಮನವಿ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ದಾಖಲೆ ಇಲ್ಲದ ಧಾರ್ಮಿಕ ಸ್ಥಳಗಳಿಗೆ ದಾಖಲೆ ನೀಡುವಂತೆ ಸರಕಾರವನ್ನು ಅಗ್ರಹಿಸಿದ್ದು ಶೀಘ್ರದಲ್ಲೇ ಆದೇಶ ಬರಲಿದೆ ಎಂದು ಶಾಸಕರಾದ ಅಶೋಕ್ ರೈ ಹೇಳಿದರು.
ಅವರು ಬೆಟ್ಟಂಪಾಡಿ ವಿನಾಯಕ ನಗರದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಶ್ರೀ ಸಿದ್ದಿವಿನಾಯಕ ಭಜನಾ ಮಂದಿರಕ್ಕೆ ಭೇಟಿ ನೀಡಿ ಕಾಮಗಾರಿ ವೀಕ್ಷಣೆ ಮಾಡಿದರು.ದಾಖಲೆಗಳಿಲ್ಲದ ಕಾರಣ ಹೆಚ್ಚಿನ ಭಜನಾ ಮಂದಿರ ಮತ್ತು ದೈವ, ದೇವಸ್ಥಾನಗಳಿಗೆ ಅನುದಾನ ಇದ್ದರೂ ಪಡೆದುಕೊಳ್ಳಲಾಗದ ಪರಿಸ್ಥಿತಿ ಇದೆ. ದೇವರ ಹೆಸರಿನಲ್ಲಿ, ಧರ್ಮದ ಹೆಸರಿನಲ್ಲಿ ವೋಟು ಪಡೆದವರು ಇದುವರೆಗೂ ಈ ವಿಚಾರದಲ್ಲಿ ಬಾಯಿ ತೆರೆಯಲಿಲ್ಲ ಎಂದು ಶಾಸಕರು ಹೇಳಿದರು.