ಕರೆಂಟ್ ಬಿಲ್ ಯಾರೂ ಕಟ್ಟಬೇಡಿ ಎಂದ ನಳಿನ್ ಕುಮಾರ್ ಕಟೀಲ್
ನಿಮ್ಮ ಸರಕಾರ ಆಶ್ವಾಸನೆ ನೀಡಿದ್ದ 15 ಲಕ್ಷ ರೂ. ಎಲ್ಲಿ ಎಂದು ಪ್ರಶ್ನಿಸಿದ ನೆಟ್ಟಿಗರು
ಕಾಂಗ್ರೆಸ್ ನೀಡಿದ ಗ್ಯಾರಂಟಿ ಯೋಜನೆ ಕೂಡಲೇ ಜಾರಿಗೊಳಿಸಬೇಕು, ಸರಕಾರ ಬಂದು 24 ಗಂಟೆಯೊಳಗೆ ಗ್ಯಾರಂಟಿ ಯೋಜನೆ ಜಾರಿಗೊಳಿಸುತ್ತೇವೆ ಎಂದಿರುವ ಕಾಂಗ್ರೆಸ್ ಇವತ್ತಿನ ವರೆಗೂ ಯೋಜನೆ ಜಾರಿಗೊಳಿಸಲು ವಿಫಲವಾಗಿದೆ. ಯಾವುದೇ ಕಾರಣಕ್ಕೂ ಯಾರೂ ವಿದ್ಯುತ್ ಬಿಲ್ ಕಟ್ಟಬಾರದು ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ, ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಉಚಿತ ಯೋಜನೆಯ ಆಶ್ವಾಸನೆ ಮೂಲಕ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಆದರೆ ಯೋಜನೆಗಳನ್ನು ಈಡೇರಿಸುವಲ್ಲಿ ಕಾಂಗ್ರೆಸ್ ವಿಫಲವಾಗಿದ್ದು ರಾಜ್ಯದಲ್ಲಿ ಅರಾಜಕತೆ ಸೃಷ್ಠಿಯಾಗಿದೆ, ಕರೆಂಟ್ ಬಿಲ್ ಕಟ್ಟುವುದಾಗಲೀ, ಮಹಿಳೆಯರು ಬಸ್ ಟಿಕೆಟ್ ಪಡೆದುಕೊಳ್ಳುವುದಾಗಲೀ ಅವಶ್ಯಕತೆಯಿಲ್ಲ ಎಂದು ಕಟೀಲ್ ಹೇಳಿದ್ದಾರೆ.
ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ನೆಟ್ಟಿಗರು ತಿರುಗೇಟು ನೀಡಿದ್ದು 2014ರಲ್ಲಿ ನಿಮ್ಮ ಸರಕಾರ ಆಶ್ವಾಸನೆ ನೀಡಿದ್ದ 15 ಲಕ್ಷ ರೂ ಎಲ್ಲರ ಅಕೌಂಟ್ ಗೆ ಬಂತಾ? ಅದರ ಬಗ್ಗೆಯೂ ಸ್ವಲ್ಪ ಮಾತನಾಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಕಾಂಗ್ರೆಸ್ ಸರಕಾರ ನುಡಿದಂತೆ ನಡೆಯಲಿದೆ ಎಂದು ತಿರುಗೇಟು ನೀಡಿದ್ದಾರೆ.