ಕ್ರೈಂರಾಜ್ಯ

ಪ್ರಿಯಕರನ ಬ್ಲ್ಯಾಕ್’ಮೇಲ್ ಗೆ ಹೆದರಿ ಮಹಿಳೆ ಆತ್ಮಹತ್ಯೆ

ಪ್ರಿಯಕರನ ಬ್ಲ್ಯಾಕ್ ಮೇಲ್ ಗೆ ಹೆದರಿ ವಿವಾಹಿತ ಮಹಿಳೆಯೊಬ್ಬರು ಮೊಬೈಲ್ ವಿಡಿಯೋ ಮಾಡಿಕೊಂಡು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯಪುರ, ಬಬಲೇಶ್ವರ ತಾಲೂಕಿನ ಉಪ್ಪಲದಿನ್ನಿ ಗ್ರಾಮದಲ್ಲಿನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಉಪ್ಪಲದಿನ್ನಿಯ ಸುಹಾನಾ ಸೋನಾರ್ (20. ವ) ಆತ್ಮಹತ್ಯೆಗೆ ಶರಣಾದ ಮಹಿಳೆ. ನೇಣಿಗೆ ಶರಣಾಗುವ ಮುನ್ನ ಪ್ರಿಯಕರನ ಬ್ಲ್ಯಾಕ್ ಮೇಲ್ ಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಅವರು ಹೇಳಿಕೊಂಡಿದ್ದು
ನನ್ನೊಂದಿಗಿರುವ ಫೋಟೋ ನಿನ್ನ ಪತಿಗೆ ತೋರಿಸುತ್ತೇನೆ ಎಂದು ಪ್ರಿಯಕರ ಅಲ್ತಾಫ್ ಸುಲೆಮಾನ್ ಬ್ಲ್ಯಾಕ್ ಮೇಲ್ ಮಾಡಿದ್ದಾನೆ. ಮರ್ಯಾದೆಗೆ ಹೆದರಿ ಸುಹಾನಾ ಲೈವ್ ವಿಡಿಯೋ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಕಳೆದ ಏಪ್ರಿಲ್ 15ರಂದು ವಿವಾಹಿತೆ ಸುಹಾನಾ ಆತ್ಮಹತ್ಯೆಗೆ ಕಾರಣ ತಿಳಿಸಿ, ಮೊಬೈಲ್ ವಿಡಿಯೋ ಮಾಡಿ ನೇಣಿಗೆ ಶರಣಾಗಿದ್ದಾರೆ. ಉಪ್ಪಲದಿನ್ನಿ ಗ್ರಾಮದ ಅಲ್ತಾಫ್ ಸುಲೆಮಾನ್ ಒಂದು ವರ್ಷದ ಹಿಂದೆ ಸುಹಾನಾ ಜೊತೆ ಸಲುಗೆ ಬೆಳೆಸಿ ಪ್ರೀತಿಸುತ್ತಿದ್ದ. ಈ ವಿಷಯ ಸುಹಾನಾ ಪೋಷಕರಿಗೆ ಗೊತ್ತಾಗಿ ಹಿರಿಯರ ಸಮ್ಮುಖದಲ್ಲಿ ಅಲ್ತಾಫ್’ಗೆ ತಾಕೀತು ಮಾಡಿದ್ದರು. ಬಳಿಕ ಸುಹಾನಾ ಹೊಕ್ಕುಂಡಿ ಗ್ರಾಮದ ಶರೀಫ್ ಸೋನಾರ್ ಜೊತೆಗೆ ಮದುವೆ ಮಾಡಲಾಗಿತ್ತು.

ಗಂಡನನ್ನು ಬಿಟ್ಟು ಬಾ, ಇಲ್ಲವಾದರೆ ನನ್ನೊಂದಿಗಿರುವ ಫೋಟೋ ನಿನ್ನ ಗಂಡನಿಗೆ ತೋರಿಸುತ್ತೇನೆ ಎಂದು ಸುಹಾನಾಳಿಗೆ ಅಲ್ತಾಫ್ ಸುಲೆಮಾನ್ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಎನ್ನಲಾಗಿದೆ. ಇದರಿಂದ ಬೇಸತ್ತಿದ್ದ ಸುಹಾನಾ, ಮೂವರ ಹೆಸರು ಹೇಳಿ ಆತ್ಮಹತ್ಯೆಗೆ ಶರಣಾಗಿದ್ದಳೆ. ಈ ಕುರಿತು ಸುಹಾನಾ ತಂದೆ ಅಸ್ಲಂ ಮುಲ್ಲಾ ಪೊಲೀಸ್ ದೂರು ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!