ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳುವ ನೈತಿಕತೆ ವಿಜಯೇಂದ್ರಗಿಲ್ಲ: ಈಶ್ವರ್ ಖಂಡ್ರೆ
ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳುವ ನೈತಿಕತೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಇಲ್ಲ ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.

ಮುಡಾ ಕೇಸ್‌ನಲ್ಲಿ ಸಿಎಂ ರಾಜೀನಾಮೆಗೆ ಒತ್ತಾಯಿಸಿರುವ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳುತ್ತಿರುವ ನೀವು ಮೊದಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಸಿದ್ದರಾಮಯ್ಯ ರಾಜೀನಾಮೆ ಕೇಳ್ತಿರೋ ವಿಜಯೇಂದ್ರ ರಾಜೀನಾಮೆ ಯಾವಾಗ ಅಂತ ವಿಜಯಪುರ ಭಾಗದವರು ಕೇಳ್ತಿದ್ದಾರೆ. ನಿಮ್ಮ ಕುರ್ಚಿ ಅಲುಗಾಡುತ್ತಿದೆ. ಹೀಗಿರುವಾಗ ಸಿದ್ದರಾಮಯ್ಯ ರಾಜೀನಾಮೆ ಕೇಳ್ತೀರಾ, ನಿಮಗೆ ಆ ನೈತಿಕತೆ ಇದೆಯಾ ಎಂದು ತಿರುಗೇಟು ನೀಡಿದ್ದಾರೆ.
136 ಶಾಸಕರಿಂದ ಆಯ್ಕೆ ಆದ ಸಿಎಂ ಅವರ ರಾಜೀನಾಮೆಯನ್ನು ವಿಪಕ್ಷಗಳು ಕೇಳ್ತಿವೆ. ವಿಜಯೇಂದ್ರ ಅವರೇ ಶಾಸಕ ಮುನಿರತ್ನ, ಅಶೋಕ್, ಯಡಿಯೂರಪ್ಪ, ಸಿ.ಟಿ ರವಿ, ಜೆಡಿಎಸ್ ನಾಯಕ ಹೆಚ್.ಡಿ. ರೇವಣ್ಣ ಮೇಲೆ ಆರೋಪ ಇದೆ. ಅವರ ರಾಜೀನಾಮೆ ಪಡೆದಿದ್ದೀರಾ? ಯತ್ನಾಳ್ ನಿಮ್ಮ ಕುಟುಂಬ ಬಗ್ಗೆ ಏನೋನೋ ಮಾತಾಡಿದ್ದಾರೆ. ಅವರ ಮೇಲೆ ಕ್ರಮ ತೆಗೆದುಕೊಳ್ಳುವ ಧೈರ್ಯ ಇದೆಯೇ? ಎಂದು ಪ್ರಶ್ನಿಸಿದ್ದಾರೆ.