ಸುಳ್ಯ: ಅರಂತೋಡಿನಲ್ಲಿ ಕಾರು, ಸ್ಕೂಟಿ ನಡುವೆ ಅಪಘಾತ; ಸವಾರ ಸ್ಥಳದಲ್ಲೇ ಮೃತ್ಯು
ಸುಳ್ಯ ತಾಲೂಕಿನ ಮಾಣಿ ಮೈಸೂರು ಹೆದ್ದಾರಿ ಸಮೀಪ ಅರಂತೋಡು ಮುಖ್ಯ ರಸ್ತೆಯಲ್ಲಿ ಕಾರು ಮತ್ತು ಸ್ಕೂಟಿ ಮಧ್ಯೆ ಅಪಘಾತ ನಡೆದಿದ್ದು ಸ್ಕೂಟಿ ಸವಾರ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಮೃತ ಯುವಕನನ್ನು ಸುಳ್ಯ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ನವೀನ್ ಸಂಕೇಶ್ ಎಂದು ಗುರುತಿಸಲಾಗಿದ್ದು ಅವರು ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದವರಾಗಿದ್ದಾರೆ. ಮೃತ ದೇಹವನ್ನು ಸುಳ್ಯ ಸರ್ಕಾರಿ ಆಸ್ಪತ್ರೆಯ ಇರಿಸಲಾಗಿದೆ.