ಕರಾವಳಿರಾಜಕೀಯ

ಸುಳ್ಯ ‘ಕೈ’ ಅಭ್ಯರ್ಥಿ: ಮರುಪರಿಶೀಲನೆಯಾಗಲಿ-ಹೈದರ್ ಆಲಿ ಐವತ್ತೊಕ್ಲು

ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಘೋಷಿಸಿದ ಬೆನ್ನಲ್ಲೇ ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಅಸಮಾಧಾನ ತೀವ್ರಗೊಂಡಿದ್ದು ಈ ಹಿನ್ನೆಲೆಯಲ್ಲಿ ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ಮರು ಪರಿಶೀಲನೆಯಾಗುವುದು ಒಳಿತು ಎಂದು ಸಾಹಿತಿ ಹೈದರ್ ಆಲಿ ಐವತ್ತೊಕ್ಲು ಅಭಿಪ್ರಾಯಪಟ್ಟಿದ್ದಾರೆ

ಹೈದರ್ ಆಲಿ

ಎಸ್.ಅಂಗಾರರು ಹಲವಾರು ಬಾರಿ ಶಾಸಕರಾಗಿ ಇದೀಗ ಸಚಿವರಾಗಿದ್ದೂ ಅಭಿವೃದ್ಧಿ ಶೂನ್ಯವಾಗಿದ್ದ ಸುಳ್ಯ ವಿಧಾನ ಸಭಾಕ್ಷೇತ್ರದಲ್ಲಿ ಜನತೆ ಪಕ್ಷ ಮತ್ತು ಅಭ್ಯರ್ಥಿಯ ಬದಲಾವಣೆ ಬಯಸಿದ್ದರು.
ಭ್ರಷ್ಟಾಚಾರ, ಬೆಲೆ ಏರಿಕೆ, ಕುಂಠಿತ ಅಭಿವೃದ್ಧಿ, ಅತಿಯಾದ ಧಾರ್ಮಿಕ ಅಸಹಿಷ್ಣುತೆ-ತಾರತಮ್ಯ …ಒಟ್ಟಾರೆ, ಜನರು ಆಡಳಿತ ಪಕ್ಷದಿಂದ ರೋಸಿ ಹೋಗಿದ್ದರು. ಎಲ್ಲಾ ವಿಧದಲ್ಲೂ ಕಾಂಗ್ರೆಸ್‌ ಪಕ್ಷಕ್ಕೆ ಅನುಕೂಲಕರ ವಾತಾವರಣ ಇರುವಾಗ ಕೈ ಪಾಳಯ ಅಭ್ಯರ್ಥಿ ಆಯ್ಕೆಯಲ್ಲಿ ಎಡವಿದೆ ಎಂದು ಅನಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ಮುಂದಿನ ಕೈ ಅಭ್ಯರ್ಥಿ ಎಂದೇ ಬಿಂಬಿತರಾಗಿದ್ದ,ಈಗಾಗಲೇ ಕ್ಷೇತ್ರದ ತುಂಬಾ ಓಡಾಡಿ,ಜನರೊಂದಿಗೆ ಮುಖ್ಯವಾಗಿ ಯುವಕರೊಂದಿಗೆ ಬೆರೆತು ಅಪಾರ ಅಭಿಮಾನಿಗಳನ್ನು ಹೊಂದಿರುವ ಮಡಿಕೇರಿಯ ನಂದಕುಮಾರ್ ಎಂಬುವರು ಅಭ್ಯರ್ಥಿ ಎಂದು ಕಾರ್ಯಕರ್ತರು ತಿಳಿದಿದ್ದರೆ ಅಭ್ಯರ್ಥಿಗಳ ಘೋಷಣೆ ವೇಳೆ ಬೇರೆಯದೇ ಹೆಸರು ಬಂದಿದೆ.

ಕಾಂಗ್ರೆಸ್ ನಾಯಕರ ಇಂತಹ ತಪ್ಪು ಹೆಜ್ಜೆಗಳೇ ಪಕ್ಷದ ಸೋಲಿಗೆ ಕಾರಣವಾಗುತ್ತದೆ. ಆದುದರಿಂದ, ಕಾರ್ಯಕರ್ತರ ಅಭಿಪ್ರಾಯಗಳನ್ನು ಸಂಗ್ರಹಿಸಿ,ಮನ್ನಿಸಿ ,ಮರುಪರಿಶೀಲನೆಗೊಳಿಸಿ B-Form ನೀಡುವುದು ಒಳಿತು.
____________________
✍️ಹೈದರ್ ಆಲಿ ಐವತ್ತೊಕ್ಲು

Leave a Reply

Your email address will not be published. Required fields are marked *

error: Content is protected !!