ಕರಾವಳಿರಾಜಕೀಯ

ಪುತ್ತೂರು:ದಾಖಲೆ ಬರೆದ ಅಶೋಕ್ ರೈ ರೋಡ್ ಶೋ: ಹರಿದು ಬಂದ ಜನಸಾಗರ

ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಅವರ ಮತ ಯಾಚನೆಯ ರೋಡ್ ಶೋ ದಾಖಲೆ ನಿರ್ಮಿಸಿದೆ. ಬೊಳ್ವಾರಿನಿಂದ ದರ್ಬೆ ವೃತ್ತದವರೆಗೆ ಇಂದು ಸಂಜೆ ನಡೆದ ರೋಡ್ ಶೋದಲ್ಲಿ ಸುಮಾರು 12ರಿಂದ 15 ಸಾವಿರದಷ್ಟು ಮಂದಿ ಭಾಗವಹಿಸಿದ್ದು ರೋಡ್ ಶೋ ಭರ್ಜರಿ ಯಶಸ್ಸು ಕಂಡಿದೆ.

ರಸ್ತೆಯ ಇಕ್ಕೆಲೆಗಳಲ್ಲೂ ನೂರಾರು ಮಂದಿ ನಿಂತು ರೋಡ್ ಶೋ ವೀಕ್ಷಣೆ ಮಾಡಿದರು.

ರೋಡ್ ಶೋಗೆ ಅಂದಾಜು 5 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇತ್ತಾದರೂ ಸಮಾರೋಪಾದಿಯಲ್ಲಿ ಜನ ಸಾಗರವೇ ಹರಿದು ಬಂದಿತ್ತು. ಎತ್ತ ನೋಡಿದರೂ ಜನ ಜಂಗುಲಿಯೇ ಕಂಡು ಬರುತ್ತಿತ್ತು. ಅಶೋಕ್ ರೈ ಪರ ಹಾಗೂ ಕಾಂಗ್ರೆಸ್ ಪರವಾದ ಘೋಷಣೆಗಳು ಮುಗಿಲು ಮುಟ್ಟಿತ್ತು. ಮಹಿಳೆಯರ ಸಂಖ್ಯೆಯೂ ಅತ್ಯಧಿಕವಾಗಿತ್ತು.

ದರ್ಬೆ ಸರ್ಕಲ್ ಬಳಿ ವಾಗ್ಮಿ ನಿಖೇತ್ ರಾಜ್, ಅಭ್ಯರ್ಥಿ ಅಶೋಕ್ ರೈ ಭಾಷಣ ಮಾಡಿದರು. ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಎಂ.ಬಿ ವಿಶ್ವನಾಥ ರೈ, ರಾಜಾರಾಮ್, ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ನಗರ ಕಾಂಗ್ರೆಸ್ ಅಧ್ಯಕ್ಷ ಎಚ್ ಮಹಮ್ಮದ್ ಆಲಿ ಮತ್ತಿತರ ನಾಯಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!