ಎಸ್ಸೆಸ್ಸೆಲ್ಸಿ ಫಲಿತಾಂಶ: ನಾಲ್ವರು ವಿದ್ಯಾರ್ಥಿಗಳಿಗೆ 625ಕ್ಕೆ 625 ಅಂಕ
2022-23ನೇ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ನಾಲ್ವರು ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದು ಸಾಧನೆ ಮಾಡಿದ್ದಾರೆ.
ಬೆಂಗಳೂರಿನ ನ್ಯೂ ಮೆಕಾಲೆ ಶಾಲೆಯ ಭೂಮಿಕಾ ಪೈ, ವಿಜಯಪುರದ ಆಕ್ಸ್ ಫರ್ಡ್ ಹೈಸ್ಕೂಲ್ ನ ಭೀಮನಗೌಡ ಪಾಟೀಲ್, ಚಿಕ್ಕಬಳ್ಳಾಪುರ ಜಿಲ್ಲೆಯ ಬಿಜಿಎಸ್ ಶಾಲೆ ಯಶಸ್ ಗೌಡ, ಬೆಳಗಾವಿ ಜಿಲ್ಲೆಯ ಶ್ರೀ ಕುಮಾರೇಶ್ವರ ಶಾಲೆಯ ಅನುಪಮಾ ಶ್ರೀಶೈಲ್ ಹಿರೆಹೊಳಿ 625ಕ್ಕೆ 625 ಅಂಕ ಪಡೆದುಕೊಂಡಿದ್ದಾರೆ.