ಕೊನೆಗೂ ಇನಾಯತ್ ಅಲಿ ಪಾಲಾದ ಮಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್
ಕೊನೆಗೂ ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್’ನಿಂದ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರಕ್ಕೆ ಇನಾಯತ್ ಅಲಿ ಅವರಿಗೆ ಟಿಕೆಟ್ ಸಿಕ್ಕಿದೆ.

ಇನಾಯತ್ ಅಲಿ ಮತ್ತು ಮೊಯ್ದೀನ್ ಬಾವ ನಡುವೆ ಟಿಕೆಟ್ ಗಾಗಿ ತೀವ್ರ ಪೈಪೋಟಿ ನಡೆತ್ತಾಲ್ಲದೇ ಕೊನೆಯ ವರೆಗೂ ಯಾರಿಗೂ ಟಿಕೆಟ್ ಘೋಷಣೆ ಆಗದೇ ತೀವ್ರ ಕುತೂಹಲ ಮೂಡಿತ್ತು. ಇದೀಗ ಇಬ್ಬರ ಸ್ಪರ್ಧೆಯಲ್ಲಿ ಇನಾಯತ್ ಅಲಿ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಇನಾಯತ್ ಅಲಿ ಗೆ ಟಿಕೆಟ್ ನೀಡಲು ಒಲವು ತೋರಿರುವುದಾಗಿ ತಿಳಿದು ಬಂದಿದೆ. ಟಿಕೆಟ್ ವಂಚಿತ ಮಾಜಿ ಶಾಸಕ ಮೊಯ್ದೀನ್ ಬಾವ ಅವರ ಮುಂದಿನ ನಡೆ ಕುತೂಹಲ ಮೂಡಿಸಿದೆ.