ಸುಳ್ಯ ಕಾಂಗ್ರೆಸ್: ಬಿ ಫಾರಂ ಪೆಂಡಿಂಗ್: ರಮಾನಾಥ ರೈಯವರಿಗೆ ಮಹತ್ವದ ಜವಾಬ್ದಾರಿ
ಸುಳ್ಯ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿಚಾರ ವಾಗಿ ಎದ್ದಿರುವ ಗೊಂದಲ ನಿವಾರಣೆಗೆ ಇಂದು ನಂದಕುಮಾರ್ ಅಭಿಮಾನಿ ಬಳಗ ಮತ್ತು ಸುಳ್ಯ ಮತ್ತು ಕಡಬ ಬ್ಲಾಕ್ ಕಾಂಗ್ರೆಸ್ ಸಮಿತಿಯವರನ್ನು ಮತ್ತು ನಂದಕುಮಾರ್ ಹಾಗೂ ಕೃಷ್ಣಪ್ಪರನ್ನು ಮಾತುಕತೆಗೆ ಬೆಂಗಳೂರು ಕೆಪಿಸಿಸಿ ಕಚೇರಿಗೆ ಕರೆಸಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಮಾತುಕತೆ ನಡೆಸಿರುವುದಾಗಿ ತಿಳಿದು ಬಂದಿದೆ.
ಈಗಾಗಲೇ ಕೃಷ್ಣಪ್ಪರಿಗೆ ಘೋಷಣೆ ಮಾಡಿರುವ ಬಿ ಫಾರಂ ನ್ನು ಎರಡು ದಿನ ಕಾಯ್ದಿರಿಸಿದ್ದು, ಕೆಪಿಸಿಸಿ ತಂಡದಿಂದ ಮರು ಸರ್ವೇ ನಡೆಸಿ ವರದಿ ಪಡೆಯುವುದು ಮತ್ತು ಮಾಜಿ ಸಚಿವ ಬಿ. ರಮಾನಾಥ ರೈ ಯವರು ಸುಳ್ಯದಲ್ಲಿ ಸಭೆ ನಡೆಸಿ ಅಲ್ಲಿನ ವಸ್ತು ಸ್ಥಿತಿಯ ವರದಿಯನ್ನು ಎ ಐ ಸಿ ಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಕೆಪಿಸಿಸಿ ಅಧ್ಯಕ್ಷರಿಗೆ ವರದಿ ಸಲ್ಲಿಸಲು ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ.
ಈ ಎರಡೂ ವರದಿಯನ್ನು ಪರಿಗಣಿಸಿ ಬಿ ಫಾರಂ ನ್ನು ಪರಾಮರ್ಶೆ ನಡೆಸಿ ಅಧಿಕೃತ ಅಭ್ಯರ್ಥಿಗೆ ಬಿ ಫಾರಂ ನೀಡಲಾಗುವುದು ಎಂದು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ.
ಹಾಗಾಗಿ ಎ.15ರಂದು ನಂದಕುಮಾರ್ ಅವರು ನಾಮಪತ್ರ ಸಲ್ಲಿಸಲು ನಿರ್ಧರಿಸಿರುವುದನ್ನು ಮುಂದೂಡಲಾಗಿದೆ ಎಂದು ವರದಿಯಾಗಿದೆ