ಸಂಪಾಜೆ: ಬಸ್-ಕಾರು ನಡುವೆ ಭೀಕರ ಅಪಘಾತದಲ್ಲಿ ಮೃತಪಟ್ಟವರ ಗುರುತು ಪತ್ತೆ ; ಇಬ್ಬರು ಆಸ್ಪತ್ರೆಗೆ ದಾಖಲು
ಸುಳ್ಯ: ಸಂಪಾಜೆಯಲ್ಲಿ KSRTC ಬಸ್ ಮತ್ತು ಕಾರು ನಡುವೆ ನಡೆದ ಭೀಕರ ಅಪಘಾತದಲ್ಲಿ 6 ಮಂದಿ ಮೃತಪಟ್ಟಿದ್ದು 2 ಮಂದಿ ಗಂಭೀರ ಗಾಯಗೊಂಡಿದ್ದಾರೆ. ಮೃತಪಟ್ಟವರನ್ನು ಮಂಡ್ಯ ಮಳವಳ್ಳಿ ತಾಲೂಕಿನವರು ಎಂದು ಗುರುತಿಸಲಾಗಿದೆ. ಮಡಿಕೇರಿ ಕಡೆಗೆ ಹೋಗುತ್ತಿದ್ದ ಬಸ್ ಹಾಗು ಸುಳ್ಯ ಕಡೆಗೆ ಬರುತ್ತಿದ್ದ ಕಾರು ಮಧ್ಯೆ ಅಪಘಾತ ಸಂಭವಿಸಿದೆ.

ಮಳವಳ್ಳಿ ತಾಲೂಕಿನವರಾದ ಕುಮಾರ (35. ವ), ಶೀಲಾ(28. ವ), ಪ್ರಿಯಾಂಕ(42. ವ),ಮಕ್ಕಳಾದ ಮನಸ್ವಿ(7. ವ), ಯಶಸ್ ಗೌಡ (11ವ) ಮತ್ತು ಒಂದುವರೆ ವರ್ಷ ಪ್ರಾಯದ ಮಿಷಿಕಾ ಮೃತಪಟ್ಟವರು. ಗಂಭೀರ ಗಾಯಗೊಂಡ ಮಂಜುನಾಥರನ್ನು ಮಂಗಳೂರು ಆಸ್ಪತ್ರೆಗೆ ಮತ್ತು ಬಾಲಕ ಬಿಯಾನ್ ಗೌಡರನ್ನು ಕೆವಿಜಿ ಮೆಡಿಕಲ್ ಕಾಲೇಜಿಗೆ ದಾಖಲಿಸಿ ಚಿಕಿತ್ಸೆ ಪಡೆಯುತ್ತಿದ್ದಾರೆ.