ಕರಾವಳಿರಾಜಕೀಯ

ನಾಳೆ(ಫೆ.6) ಪುತ್ತೂರಿನಲ್ಲಿ ಕಾಂಗ್ರೆಸ್ ಭವನಕ್ಕೆ ಶಿಲಾನ್ಯಾಸ-


ಪುತ್ತೂರು: ರಾಜ್ಯದಲ್ಲಿ 100 ಕಾಂಗ್ರೆಸ್ ಭವನ ನಿರ್ಮಾಣವಾಗಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಕನಸು ಪುತ್ತೂರಿನಲ್ಲಿ ನನಸಾಗಿದ್ದು ರಾಜ್ಯದಲ್ಲೇ ಪ್ರಥಮ ಎಂಬಂತೆ ನಾಳೆ(ಫೆ.6) ಕಾಂಗ್ರೆಸ್ ಭವನಕ್ಕೆ ಶಿಲಾನ್ಯಾಸ ನೆರವೇರಲಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದರು.
ನಾಳೆ ನಡೆಯುವ ಕಾಂಗ್ರೆಸ್ ಭವನ ಉದ್ಘಾಟನೆ ಪ್ರಯುಕ್ತ ಇಂದು ನಡೆದ ಪೂರ್ವಸಿದ್ದತಾ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.


ಸಭೆಯಲ್ಲಿ ಪುತ್ತೂರಿನಲ್ಲಿ ಕಾಂಗ್ರೆಸ್ ಭವನ ನಿರ್ಮಾಣವಾಗುತ್ತಿರುವ ಬಗ್ಗೆ ವಿವರಣೆ ನೀಡಿದರು. ಪುತ್ತೂರಿನ ಕಾಂಗ್ರೆಸ್ ಗೆ ಇನ್ನು ಸ್ವಂತ ಭವನ ನಿರ್ಮಾಣವಾಗುವುದರ ಜೊತೆಗೆ ಪಕ್ಷದ ಕಾರ್ಯಕರ್ತರಿಗೆ ಇನ್ನಷ್ಟು ಹೆಚ್ಚು ಸಾರ್ವಜನಿಕ ಸೇವೆ ಮಾಡಲು ಬಳಕೆಯಾಗಬೇಕು ಎಂದು ಹೇಳಿದರು.‌
ನಾಳೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಶಿಲಾನ್ಯಾಸ ನಡೆಸಿಕೊಡಲಿದ್ದು ಜಿಲ್ಲಾ ಉಸ್ತುವಾರಿ ಸಚಿವರ ಸಹಿತ ಜಿಲ್ಲೆಯ ಪ್ರಮುಖ ಮುಖಂಡರು ಭಾಗವಹಿಸಲಿದ್ದಾರೆ.
ಸಭೆಯಲ್ಲಿ ಬ್ಲಾಕ್  ಅಧ್ಯಕ್ಷರುಗಳಾದ  ಕೆ ಪಿ ಆಳ್ವ, ಪದ್ಮನಾಭ ಪೂಜಾರಿ, ಯು ಟಿ ತೌಸೀಫ್, ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ,ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ ಎಸ್ ಮಹಮ್ಮದ್, ಗ್ಯಾರಂಟಿ‌ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಪಂಜಿಗುಡ್ಡೆ ಈಶ್ವರಭಟ್, ಮುರಳೀಧರ್ ರೈ ಮಟಂತಬೆಟ್ಟು, ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ರಹಿಮಾನ್ ಆಝಾದ್, ಅರ್ಷದ್ ದರ್ಬೆ, ಚಂದ್ರಪ್ರಭಾ ಗೌಡ, ಕುಂಬ್ರ ದುರ್ಗಾಪ್ರಸಾದ್ ರೈ,ಸುಪ್ರಿತ್ ಕಣ್ಣಾರಾಯ, ಪ್ರವೀಣ್ ಚಂದ್ರ ಆಳ್ವ,ಯುವ ಕಾಂಗ್ರೆಸ್ ಅಧ್ಯಕ್ಷ ಫಾರೂಕ್ ಪೆರ್ನೆ, ಮೋನು ಬಪ್ಪಳಿಗೆ, ಫಾರೂಕ್ ಬಾಯಬ್ಬೆ,ಬಶೀರ್ ಪರ್ಲಡ್ಕ,ಗಿರೀಶ್ ರೈ ಸಂಟ್ಯಾರ್,ಪೂರ್ಣೇಶ್ ಭಂಡಾರಿ,ಅಬ್ಬು ನವಗ್ರಾಮ,ಲೋಕೇಶ್ ಪಡ್ಡಾಯೂರ್,ಶರೂನ್ ಸಿಕ್ವೆರಾ ,ಶಶಿಕಿರಣ್ ರೈ ನೂಜಿಬೈಲು,ಪೃಥ್ವಿರಾಜ್, ಹಾಫಿಲ್ ಕೂರ್ನಡ್ಕ,ಇಂಬ್ರಾಝ್ ಬೊಳುವಾರು ಮೊದಲಾದವರು ಇದ್ದರು

Leave a Reply

Your email address will not be published. Required fields are marked *

error: Content is protected !!