ಕರಾವಳಿರಾಜಕೀಯ

ಸುಳ್ಯ ಕ್ಷೇತ್ರದಲ್ಲಿ ನಂದಕುಮಾರ್’ಗೆ ‘ಕೈ’ ತಪ್ಪಿದ ಟಿಕೆಟ್:

ಪಕ್ಷದ ಚಟುವಟಿಕೆಯಿಂದ ತಟಸ್ಥರಾಗಿರಲು ದುಗ್ಗಲಡ್ಕ 1ನೇ ವಾರ್ಡ್ ಸಮಿತಿ ಸಭೆಯಲ್ಲಿ ನಿರ್ಧಾರ

ಸುಳ್ಯದಲ್ಲಿ ಕಾಂಗ್ರೆಸ್ ಗೆ ಈ ಬಾರಿ ಗೆಲುವಿನ ವಾತಾವರಣ ಇದ್ದು ನಂದಕುಮಾರ್ ಅಭ್ಯರ್ಥಿಯಾದರೆ ಗೆಲುವು ನಿಶ್ಚಿತ ಎಂಬ ಸನ್ನಿವೇಶದಲ್ಲಿ. ಕಾಂಗ್ರೆಸ್ ಹೈಕಮಾಂಡ್ ಜಿ. ಕೃಷ್ಣಪ್ಪರಿಗೆ ಟಿಕೆಟ್ ಘೋಷಿಸಿರುವುದು ಕಾಂಗ್ರೆಸ್ ಕಾರ್ಯಕರ್ತರಿಗೆ ಅಸಮಾಧಾನ ತಂದಿದೆ. ಆದ್ದರಿಂದ ಕಾಂಗ್ರೆಸ್ ಗೆಲ್ಲಬೇಕು ಎಂಬ ದೃಷ್ಟಿಯಲ್ಲಿ ಜನಭಿಪ್ರಾಯ ಹೊಂದಿರುವ, ಕಾರ್ಯಕರ್ತರ ಅಭಿಮಾನವನ್ನು ಹೊಂದಿರುವ ನಂದಕುಮಾರ್ ರವರಿಗೆ ಬಿ ಫಾರಂ ನೀಡಿ ಅಭ್ಯರ್ಥಿಯಾಗಿ ಘೋಷಿಸಬೇಕು. ಇಲ್ಲದಿದ್ದರೆ ಪಕ್ಷದ ಚಟುವಟಿಕೆಯಿಂದ ತಟಸ್ಥರಾಗಿ ಉಳಿಯುವುದೆಂದು ದುಗ್ಗಲಡ್ಕ 1 ನೇ ವಾರ್ಡ್ ಸಮಿತಿ ಸದಸ್ಯರು ಒಕ್ಕೊರಳ ತೀರ್ಮಾನ ಕೈಗೊಂಡಿದ್ದೇವೆ ಎಂದು ಸಂಘಟಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೂತ್ ಅಧ್ಯಕ್ಷ ಚಂದ್ರಶೇಖರ ನಾಯ್ಕ್ ಕಂದಡ್ಕರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸದಸ್ಯರು ತಮ್ಮ ತಮ್ಮ ಅಭಿಪ್ರಾಯ ಮಂಡಿಸಿ ಈ ತೀರ್ಮಾನ ಕೈಗೊಳ್ಳಲಾಯಿತು.
ಸಭೆಯಲ್ಲಿ ಬೂತ್ ಸಮಿತಿಯ ಸದಾಸ್ಯರಾದ ಕೃಷ್ಣಸ್ವಾಮಿ ಕಂಡಡ್ಕ, ಶಿವಕುಮಾರ್ ಕಂಡಡ್ಕ, ಭವಾನಿಶಂಕರ್ ಕಲ್ಮಡ್ಕ, ವಿಜಯಕುಮಾರ್ ಕಂದಡ್ಕ, ಮೂಸಾಕುಂಜಿ ಕೊಳಂಜಿಕೋಡಿ, ಹುಸೈನಾರ್ ಕೊಳಂಜಿಕೋಡಿ, ಅಬೂಬಕ್ಕರ್ ಕೊಳಂಜಿಕೋಡಿ, ಹಸೈನಾರ್ ಕೊಳಂಜಿಕೋಡಿ, ಸಿದ್ದಿಕ್ ಕೊಳಂಜಿಕೋಡಿ, ವಿಜಯಕುಮಾರ್ ಕಂದಡ್ಕ, ಮಂಜುನಾಥ್ ಕಂದಡ್ಕ, ಸುರೇಶ್ ಕಂದಡ್ಕ, ಸುಕುಮಾರ್ ಕಂದಡ್ಕ, ರಫೀಕ್ ನೀರಬಿದಿರೆ, ಬಶೀರ್ ನೀರಬಿದಿರೆ, ಉಮ್ಮರ್ ಕೊಳಂಜಿಕೋಡಿ, ಅದ್ದು ಕೊಳಂಜಿಕೋಡಿ, ಸಂಶುದ್ದಿನ್ ಕೊಳಂಜಿಕೋಡಿ, ತಮೀಮ್ ಕೊಳಂಜಿಕೋಡಿ, ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!