ಸವಣೂರು ಚಾಪಳ್ಳ, ಮಾಂತೂರು, ಕಾವು, ಸಾರೆಪುಣಿ ಮದ್ರಸಕ್ಕೆ ಶೇ.100 ಫಲಿತಾಂಶ
ಪುತ್ತೂರು: ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ 2023 ನೇ ಸಾಲಿನಲ್ಲಿ ನಡೆಸಿದ ಮದರಸ ಪಬ್ಲಿಕ್ ಪರೀಕ್ಷೆಯಲ್ಲಿ ಸವಣೂರು ಚಾಪಳ್ಳ ಹಿದಾಯತುಲ್ ಇಸ್ಲಾಂ ಮದರಸ, ಮಾಂತೂರು ಹಿದಾಯತುಲ್ ಇಸ್ಲಾಂ ಮದರಸ, ಕಾವು ನೂರುಲ್ ಇಸ್ಲಾಂ ಮದರಸ, ಸಾರೆಪುಣಿ ದಾರುಲ್ ಉಲೂಮ್ ಮದರಸ ಶೇ.100 ಫಲಿತಾಂಶ ಪಡೆದುಕೊಂಡಿದೆ.
ಸವಣೂರು ಚಾಪಳ್ಳ ಮದರಸ:
ಸವಣೂರು ಚಾಪಳ್ಳ ಹಿದಾಯತುಲ್ ಇಸ್ಲಾಂ ಮದರಸ 5ನೇ ತರಗತಿಯಲ್ಲಿ ಪರೀಕ್ಷೆ ಬರೆದ 25 ವಿದ್ಯಾರ್ಥಿಗಳಲ್ಲಿ 3 ಮಂದಿ ಡಿಸ್ಟಿಂಕ್ಷನ್, ಪ್ರಥಮ, 9 ಮಂದಿ ಪ್ರಥಮ, 8 ಮಂದಿ ದ್ವಿತೀಯ ಮತ್ತು 5 ಮಂದಿ ತೃತೀಯ ಸ್ಥಾನ ಪಡೆದುಕೊಂಡಿದೆ. ಏಳನೇ ತರಗತಿಯಲ್ಲಿ ಒಟ್ಟು ಪರೀಕ್ಷೆ ಬರೆದ 32 ವಿದ್ಯಾರ್ಥಿಗಳಲ್ಲಿ 11 ಡಿಸ್ಟಿಂಕ್ಷನ್, 19 ಪ್ರಥಮ, 2 ಮಂದಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಹತ್ತನೇ ತರಗತಿ ಹಾಗೂ 12ನೇ ತರಗತಿಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗುದರೊಂದಿಗೆ ಶೇಕಡಾ ನೂರು ಫಲಿತಾಂಶ ಪಡೆದುಕೊಂಡಿದೆ ಎಂದು ಮದರಸ ಮುಖ್ಯ ಅಧ್ಯಾಪಕರಾದ ತಾಜುದ್ದೀನ್ ಫೈಝಿ ತಿಳಿಸಿದ್ದಾರೆ.
ಮಾಂತೂರು ಮದರಸ:
ಮಾಂತೂರು ಹಿದಾಯತುಲ್ ಇಸ್ಲಾಂ ಮದರಸವು ಸತತ ಹದಿನೇಳನೆಯ ಭಾರಿ ಶೇಕಡಾ ನೂರು ಪಲಿತಾಂಶ ಪಡೆದುಕೊಂಡಿದೆ. ಐದನೇಯ ತರಗತಿಯಲ್ಲಿ ಪರೀಕ್ಷೆ ಬರೆದ ಹನ್ನೆರಡು ವಿದ್ಯಾರ್ಥಿಗಳಲ್ಲಿ ಏಳು ಮಂದಿ ಪ್ರಥಮ, ಎರಡು ದ್ವಿತೀಯ ಮತ್ತು ಮೂರು ತ್ರಿತೀಯ ಸ್ಥಾನವನ್ನು ಪಡೆದುಕೊಂಡಿದೆ. ಏಳನೇ ತರಗತಿಯಲ್ಲಿ ಒಟ್ಟು ಪರೀಕ್ಷೆ ಬರೆದ ಹದಿಮೂರು ವಿದ್ಯಾರ್ಥಿಗಳಲ್ಲಿ,ಒಂದು ಡಿಸ್ಟಿಂಕ್ಷನ್,ಒಂಬತ್ತು ಪ್ರಥಮ,ಒಂದು ದ್ವಿತೀಯ ಮತ್ತು ಎರಡು ತ್ರತೀಯ ಸ್ಥಾನ ಪಡೆದುಕೊಂಡಿದೆ. ಹತ್ತನೇ ತರಗತಿಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗುವುದರೊಂದಿಗೆ ಸತತ ಹದನೇಳನೇ ಬಾರಿ ಶೇಕಡಾ ನೂರು ಪಲಿತಾಂಶ ಪಡೆದುಕೊಂಡಿದೆ ಎಂದು ಮದರಸ ಅದ್ಯಾಪಕರಾದ ಸಿದ್ದೀಖ್ ಮುಸ್ಲಿಯಾರ್,ಶರೀಫ್ ಮುಸ್ಲಿಯಾರ್,ರಶೀದ್ ಮುಸ್ಲಿಯಾರ್ ತಿಳಿಸಿರುತ್ತಾರೆ.
ಕಾವು ಮದರಸ:
ಕಾವು ನೂರುಲ್ ಇಸ್ಲಾಂ ಮದ್ರಸದಿಂದ ಪರೀಕ್ಷೆ ಬರೆದ ಎಲ್ಲಾ 23 ವಿದ್ಯಾರ್ಥಿಗಳು ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು ಮದರಸಕ್ಕೆ ಶೇ.100 ಫಲಿತಾಂಶ ಲಭಿಸಿದೆ. 7ನೇ ತರಗತಿಯಲ್ಲಿ ಫಾತಿಮತ್ ಮಿದ್ಹ 489 ಅಂಕದೊಂದಿಗೆ ಟಾಪ್ ಪ್ಲಸ್ ಪಡೆದಿದ್ದಾರೆ. ರಿಫಾ ಫಾತಿಮಾ 468, ಖದೀಜತ್ ಹೈಫಾ 449, ಖದೀಜತ್ ನುಸೈಬಾ 427, ಸನಾ ಫಾತಿಮಾ 425 ಅಂಕಗಳೊಂದಿಗೆ ಡಿಸ್ಟಿಂಕ್ಷನ್’ನಲ್ಲಿ ತೇರ್ಗಡೆಯಾಗಿದ್ದಾರೆ. ಐದನೇ ತರಗತಿಯಲ್ಲಿ ಮುಹಮ್ಮದ್ ಅನಸ್ 454, ಮುಹಮ್ಮದ್ ಜುನೈದ್ 436 ಹಾಗೂ ಮುಸ್ತಾಕ್ ಅಹಮ್ಮದ್ 432 ಅಂಕಗಳೊಂದಿಗೆ ಡಿಸ್ಟಿಂಕ್ಷನ್’ನಲ್ಲಿ ತೇರ್ಗಡೆ ಹೊಂದಿದ್ದಾರೆ.
ಸಾರೆಪುಣಿ ಮದರಸ:
ಸಾರೆಪುಣಿ ದಾರುಲ್ ಉಲೂಮ್ ಮದರಸದ ಓರ್ವ ವಿದ್ಯಾರ್ಥಿ ಡಿಸ್ಟಿಂಕ್ಷನ್ ಆರು ಮಂದಿ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ ಓರ್ವ ವಿದ್ಯಾರ್ಥಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಆಯಿಶತ್ ಮುಫೀದ 450 ಅಂಕ( ಶುಕೂರ್ ದಾರಿಮಿಯವರ ಪುತ್ರಿ) ಗಳಿಸಿ ಡಿಸ್ಟಿಂಕ್ಷನ್ ಪಡೆದಿದ್ದಾರೆ.
5 ,7, ತರಗತಿಯಲ್ಲಿ ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಸಾಧನೆ ಮಾಡಿದ್ದಾರೆ ಎಂದು ಸದರ್ ಮುಅಲ್ಲಿಂ ಮುಹಮ್ಮದ್ ಮುಸ್ಲಿಯಾರ್ ಬೆಳ್ಳಾರೆ ತಿಳಿಸಿದ್ದಾರೆ.