ಪುತ್ತೂರು: ನಾಪತ್ತೆಯಾಗಿದ್ದ ವ್ಯಕ್ತಿಯ ಮೃತ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ
ಪುತ್ತೂರು: 16 ದಿನಗಳಿಂದ ನಾಪತ್ತೆಯಾಗಿದ್ದ ಚಿಕ್ಕಮುಡ್ನೂರು ಗ್ರಾಮದ ಪುಳುವಾರು ಬಾಬು ಗೌಡ ಎಂಬವರ ಪುತ್ರ ಶಿವಪ್ಪ ಗೌಡ(50ವ.)ರವರ ಮೃತದೇಹ ಚಿಕ್ಕಮುಡ್ನೂರು ಗ್ರಾಮದ ಗುತ್ತಿಕಲ್ಲ್ ಎಂಬಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಮಾ.17ರಂದು ಕೂಲಿ ಕೆಲಸಕ್ಕೆಂದು ಹೋದವರು ನಂತರ ಮನೆಗೆ ಹಿಂದಿರುಗಿಲ್ಲ. ಈ ಕುರಿತು ಅವರ ಸಹೋದರ ತಿಮ್ಮಪ್ಪ ಗೌಡರವರು ಪೊಲೀಸ್ ದೂರು ನೀಡಿದ್ದರು.
ಇದೀಗ ಅವರ ಮೃತದೇಹವು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪುತ್ತೂರು ನಗರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.





