ಸಾತನೂರು: ಜಾನುವಾರು ಸಾಗಿಸುತ್ತಿದ್ದ ಇದ್ರೀಷ್ ಪಾಷ ಅನುಮಾನಾಸ್ಪದ ಸಾವು: ಪುನೀತ್ ಕೆರೆಹಳ್ಳಿ ವಿರುದ್ಧ ಪ್ರಕರಣ ದಾಖಲು
ಕನಕಪುರ ತಾಲ್ಲೂಕಿನ ಸಾತನೂರು ಸಮೀಪ ಶುಕ್ರವಾರ ತಡರಾತ್ರಿ ಇದ್ರೀಷ್ ಪಾಷ ಅನುಮಾನಾಸ್ಪದವಾಗಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರ ರಕ್ಷಣಾ ಪಡೆ ಸಂಘಟನೆಯ ಮುಖಂಡ ಪುನೀತ್ ಕೆರೆಹಳ್ಳಿ ವಿರುದ್ಧ ಪ್ರಕರಣ ದಾಖಲಾಗಿದೆ.

ಜಾನುವಾರುಗಳನ್ನು ಸಾಗಿಸುತ್ತಿದ್ದ ಸಂದರ್ಭ ವಾಹನವನ್ನು ಪುನೀತ್ ಕೆರೆಹಳ್ಳಿ ಮತ್ತು ಇನ್ನಿತರರು ಅಡ್ಡಗಟ್ಟಿದ್ದರು. ಆ ಬಳಿಕ ಇದ್ರಿಷ್ ಮೃತದೇಹ ಪತ್ತೆಯಾಗಿತ್ತು.
ಸಂಬಂಧಿಕರಿಂದ ದೂರು: ಇದ್ರೀಷ್ ಮದ್ದೂರು ಸಮೀಪದ ತೆಂಡೆಕೆರೆ ಸಂತೆಯಲ್ಲಿ ಜಾನುವಾರುಗಳನ್ನು ಖರೀದಿಸಿ ರಸೀದಿ ಸಮೇತ ಒಯ್ಯುತ್ತಿದ್ದರು. ಈ ಸಂದರ್ಭ ಸಾತನೂರಿನ ಸಂತೆಮಾಳ ಸರ್ಕಲ್‌ನಲ್ಲಿ ಅವರನ್ನು ಅಡ್ಡಗಟ್ಟಿದ ಪುನೀತ್ ಮತ್ತು ಸಹಚರರು ₹2 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದು ಹಣ ನೀಡದಿದ್ದಾಗ ಮಾರಕಾಸ್ತ್ರ ತೋರಿಸಿ ಬೆದರಿಸಿ ಹಲ್ಲೆ ನಡೆಸಿದರು. ಪೊದೆಯಲ್ಲಿ ಅವಿತಿದ್ದ ಇದ್ರೀಷ್ ಅವರನ್ನು ಎಳೆತಂದು ಹಲ್ಲೆ ನಡೆಸಿ ಕೊಂದಿದ್ದಾರೆ’ ಎಂದು ಆರೋಪಿಸಿ ಅವರ ಸಂಬಂಧಿ ಯುನುಸ್ ಪಾಷ ಎಂಬುವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.