ಕಾವು ಬದ್ರಿಯಾ ಮಜ್ಲಿಸ್ ದಶವಾರ್ಷಿಕ ಸನದುದಾನ ಮಹಾ ಸಮ್ಮೇಳನ, ಆಂಡ್ ನೇರ್ಚೆ ಕಾರ್ಯಕ್ರಮಕ್ಕೆ ಚಾಲನೆ
ಬದ್ರಿಯಾ ಎಜು ಸೆಂಟರ್ ಕಾವು, ಪುತ್ತೂರು ಇದರ ಆಶ್ರಯದಲ್ಲಿ ಹಮ್ಮಿಕೊಂಡಿರುವ ದಶವಾರ್ಷಿಕ ಸನದು ದಾನ ಮಹಾಸಮ್ಮೇಳನ, ಸಯ್ಯಿದ್ ಮುಹಮ್ಮದ್ ಹದ್ದಾದ್ ತಂಗಳ್ ರವರ ನಾಲ್ಕನೇ ಆಂಡ್ ನೇರ್ಚೆ ಕಾರ್ಯಕ್ರಮಕ್ಕೆ ಫೆ.22ರಂದು ಚಾಲನೆ ನೀಡಲಾಯಿತು.

ಕಾರ್ಯಕ್ರಮದ ಸ್ವಾಗತ ಸಮಿತಿಯ ಆರ್ಥಿಕ ಸಮಿತಿ ಕಾರ್ಯದರ್ಶಿ ಉದ್ಯಮಿ ಅಬ್ದುಲ್ ರೆಹಮಾನ್ ಶಾಲಿಮಾರ್ ಧ್ವಜಾರೋಹಣ ನಡೆಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಇದಕ್ಕೂ ಮುನ್ನ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಸಯ್ಯಿದ್ ಹದ್ದಾದ್ ತಂಗಳ್ ರವರ ನೇತೃತ್ವದಲ್ಲಿ ಮಾಡನ್ನೂರು ದರ್ಗಾ ಶರೀಫನಲ್ಲಿ ಝಿಯಾರತ್ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಮ್ಯಾನೇಜರ್ ಇಬ್ರಾಹಿಂ ಸಅದಿ ಮಾಣಿ, ಮಾಪಿಳಡ್ಕ ಮಸೀದಿ ಮುದರ್ರಿಸ್ ಹಾಫಿಲ್ ಅಬ್ದುಲ್ ಸಲಾಂ ನಿಝಮಿ ಚೆನ್ನಾರ್, ಅಬ್ಬಾಸ್ ಫೈಝಿ, ಮಾಡನ್ನೂರು ಎಸ್ ವೈ ಎಸ್ ಅಧ್ಯಕ್ಷ ಕಂಟ್ರಾಕ್ಟರ್ ಅಬ್ದುಲ್ಲ, ಮಾಡನ್ನೂರು ಕರ್ನಾಟಕ ಮುಸ್ಲಿಂ ಜಮಾಅತ್ ಸಮಿತಿ ಅಧ್ಯಕ್ಷ ಹಸೈನಾರ್, ಇಶುಬುದ್ದೀನ್ ಮುಸ್ಲಿಯರ್ ಕಾವು, ಯೂಸುಫ್ ಕಾವು, ಸ್ವಾಗತ ಸಮಿತಿ ಕನ್ವೀನರ್ ಅಬೂಶಝ ಉಸ್ತಾದ್ ಮೊದಲಾದವರು ಉಪಸ್ಥಿತರಿದ್ದರು.
ಫೆಬ್ರವರಿ 23ರಂದು ಸಮಾರೋಪ ಸಮಾರಂಭದ ಮಹಾ ಸಮ್ಮೇಳನದ ಅಂಗವಾಗಿ ಸಾಮೂಹಿಕ ದುವಾಸಂಗಮ, ಹಿಫ್ಲುಲ್ ಕುರಾನ್ ಮತ್ತು ದಹವ ಸೆಂಟರ್ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದೆ.