ಗ್ರಾಮೀಣ ಭಾಗದ ಹೆಸರಾಂತ ವಿದ್ಯಾಸಂಸ್ಥೆ; ಮೇನಾಲ ಮಧುರಾ ಇಂಟರ್ ನ್ಯಾಶನಲ್ ಸ್ಕೂಲ್
ಪುತ್ತೂರು ತಾಲೂಕಿನ ಈಶ್ವರಮಂಗಲ ಸಮೀಪದ ಮೇನಾಲದಲ್ಲಿರುವ ಮಧುರಾ ಇಂಟರ್‌ನ್ಯಾಶನಲ್ ಸ್ಕೂಲ್ ಯಶಸ್ಸಿನ ಪಥದಲ್ಲಿ ಸಾಗುತ್ತಿದ್ದು ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಮೆಚ್ಚುಗೆಯನ್ನು ಗಳಿಸಿಕೊಂಡಿದೆ.
ಕೇರಳ-ಕರ್ನಾಟಕ ಗಡಿ ಭಾಗದಲ್ಲಿ ಸ್ಥಳೀಯವಾಗಿಯೇ ಉತ್ತಮ ರೀತಿಯ ಶಿಕ್ಷಣ ನೀಡುವ ಗುರಿಯೊಂದಿಗೆ 2018ರಲ್ಲಿ ಆರಂಭಿಸಿರುವ ಮಧುರಾ ವಿದ್ಯಾಸಂಸ್ಥೆ ಮಕ್ಕಳ ದಾಖಲಾತಿ ಸೇರಿದಂತೆ ಪ್ರತಿಯೊಂದು ವಿಚಾರಗಳಲ್ಲೂ ಯಶಸ್ಸು ಕಂಡಿದೆ. ಆಧುನಿಕ ಮೌಲ್ಯಾಧಾರಿತ ಶಿಕ್ಷಣವನ್ನು ಗ್ರಾಮೀಣ ಭಾಗದಲ್ಲೂ ನೀಡಬಹುದು ಎಂಬುವುದನ್ನು ಮಧುರಾ ವಿದ್ಯಾಸಂಸ್ಥೆ ತೋರಿಸಿಕೊಟ್ಟಿದೆ.
ಸಂಸ್ಥೆಯಲ್ಲಿ ಎಲ್.ಕೆ.ಜಿ, ಯು.ಕೆ.ಜಿ, ಗ್ರೇಡ್-1ದಿಂದ ಗ್ರೇಡ್-9ರ ವರೆಗೆ ತರಗತಿಯಿದ್ದು ಹಂತ ಹಂತವಾಗಿ ಪದವಿ ವರೆಗೆ ಏರಿಸುವ ಉದ್ದೇವನ್ನು ಸಂಸ್ಥೆ ಹೊಂದಿದೆ. ಭವಿಷ್ಯದಲ್ಲಿ ಪಿಯುಸಿ, ಡಿಗ್ರಿ, ತಾಂತ್ರಿಕ ತರಬೇತು ಕಾಲೇಜು, ವಸತಿ ಶಾಲೆ, ಟೀಚರ್ಸ್ ಟ್ರೈನಿಂಗ್ ಸೆಂಟರ್, ಸ್ನಾತಕೋತ್ತರ ಪದವಿ ಕೇಂದ್ರ, ಇನ್ನಿತರ ಕೌಶಲ್ಯಾಭಿವೃದ್ದಿ ಕೋರ್ಸ್ ಅಲ್ಲದೇ ಇಂಜಿನಿಯರಿಂಗ್, ಮೆಡಿಕಲ್ ಕಾಲೇಜು ನಿರ್ಮಿಸುವ ಉದ್ದೇಶವನ್ನು ಸಂಸ್ಥೆ ಹೊಂದಿದೆ.
ಉತ್ತಮ ಆಡಳಿತ ಸಮಿತಿ ಮತ್ತು ಶಿಕ್ಷಕ/ಶಿಕ್ಷಕಿಯರ ವರ್ಗವನ್ನು ಹೊಂದಿರುವ ವಿದ್ಯಾಸಂಸ್ಥೆಯು ಉತ್ತಮ ಸಲಹಾ ಸಮಿತಿ ಮತ್ತು ನಿರ್ದೇಶಕ ತಂಡವನ್ನು ಹೊಂದಿದೆ. ಸ್ಮಾರ್ಟ್ ಕ್ಲಾಸ್‌ಗೆ ಲೀಡ್ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದ್ದು ಇನ್ನಷ್ಟು ಪರಿಣಾಮಕಾರಿ ಶಿಕ್ಷಣಕ್ಕೆ ಇದು ಕಾರಣವಾಗಲಿದೆ.
ವಿದ್ಯಾರ್ಥಿಗಳ ಅದ್ಭುತ ವಿಕಸನ: ಬೇಸಿಗೆ ಶಿಬಿರ, ಯೋಧರಿಗೆ ನುಡಿನಮನ ಕಾರ್ಯಕ್ರಮ, ರಾಷ್ಟ್ರೀಯ ಹಬ್ಬಗಳ ಆಚರಣೆ, ಶಿಕ್ಷಕರಿಗೆ ತರಬೇತಿ, ಆರೋಗ್ಯ ಮಾಹಿತಿ ಶಿಬಿರ, ಕಾನೂನು ಸಾಕ್ಷರತಾ ರಥ ಅಭಿಯಾನ, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವಾಸ, ಕ್ರೀಡಾಕೂಟ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಸಂಸ್ಥೆ ಹಮ್ಮಿಕೊಳ್ಳುತ್ತಾ ಬಂದಿದೆ. ಲೈಬ್ರೆರಿ, ಪ್ರಯೋಗ ಶಾಲೆ, ಕಂಪ್ಯೂಟರ್ ಶಿಕ್ಷಣ, ದೈಹಿಕ ಶಿಕ್ಷಣ ಸೇರಿದಂತೆ ಇನ್ನಿತರ ಚಟುವಟಿಕೆ ಇಲ್ಲಿದೆ. ಕರಾಟೆ, ಕ್ಲಾಸಿಕಲ್, ವೆಸ್ಟರ್ನ್ ನೃತ್ಯ, ಸುಸಜ್ಜಿತ ಈಜುಕೊಳದಲ್ಲಿ ನುರಿತ ತರಬೇತುದಾರರಿಂದ ಈಜು ತರಬೇತಿ ನೀಡಲಾಗುತ್ತದೆ. ಹಲವು ವಿದ್ಯಾರ್ಥಿಗಳು, ಕ್ರೀಡೆ, ಸಾಂಸ್ಕೃತಿಕ, ಶೈಕ್ಷಣಿಕ ಸ್ಪರ್ಧೆಗಳಲ್ಲಿ ಇಲ್ಲಿನ ವಿದ್ಯಾರ್ಥಿಗಳು ಹಲವು ಪ್ರಶಸ್ತಿ ಪಡೆದು ಸಾಧನೆ ಮಾಡಿದ್ದಾರೆ.
ಸ್ಕೂಲ್ ಬಸ್ ಸೌಕರ್ಯ:
ಪುತ್ತೂರು ಹಾಗೂ ಸುಳ್ಯ ತಾಲೂಕಿನ ವಿವಿಧ ಕಡೆಗಳಿಗೆ ಬಸ್ ಸೌಕರ್ಯವನ್ನು ಸಂಸ್ಥೆಯು ಒದಗಿಸುತ್ತಿದ್ದು ಪುತ್ತೂರು ಭಾಗದಿಂದ ಪುತ್ತೂರು, ದರ್ಬೆ, ಸಂಪ್ಯ, ಪರ್ಪುಂಜ, ಮೈದಾನಿಮೂಲೆ, ಕುಂಬ್ರ, ತಿಂಗಳಾಡಿ, ಅರಿಯಡ್ಕ, ಕೌಡಿಚ್ಚಾರು, ಬಡಗನ್ನೂರು, ಪಮ್ಮಲೆ, ಕಾವು, ಅಮ್ಚಿನಡ್ಕ, ಕೊಳ್ತಿಗೆ, ಈಶ್ವರಮಂಗಲ ಮೊದಲಾದ ಕಡೆಗಳಿಂದ ಸ್ಕೂಲ್ ಬಸ್ ಸೌಕರ್ಯವಿದ್ದು ಸುಳ್ಯ ಭಾಗದಿಂದ ಜಾಲ್ಸೂರು, ಅಡ್ಕಾರ್, ಕನಕಮಜಲು ಮತ್ತಿತರ ಸ್ಥಳಗಳಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ.
ಮಧುರಾ ಸ್ಕೂಲ್‌ನ ವಿಶೇಷತೆಗಳು:
-ನುರಿತ ಹಾಗೂ ಅನುಭವಿ ಶಿಕ್ಷಕ ವೃಂದ
-ಮಿತ ಶುಲ್ಕ, ಪರಿಸರ ಸ್ನೇಹಿ ಕ್ಯಾಂಪಸ್
-ಸ್ಮಾರ್ಟ್ ಕ್ಲಾಸ್, ವಿಶಾಲ ಕ್ಯಾಂಪಸ್
-ಆಧುನಿಕ ಶೈಲಿಯ ಕ್ಲಾಸ್ ರೂಮ್
-ಈಜು ತರಬೇತಿ, ವಿಶಾಲ ಈಜುಕೊಳ
-ಪುತ್ತೂರು, ಸುಳ್ಯ ಭಾಗದಿಂದ ಸ್ಕೂಲ್ ಬಸ್ ಸೌಲಭ್ಯ
ದಾಖಲಾತಿ ಪ್ರಾರಂಭ:
ಎಲ್.ಕೆ.ಜಿ.ಯಿಂದ ಗ್ರೇಡ್-9 ತರಗತಿ ವರೆಗೆ ದಾಖಲಾತಿ ಪ್ರಾರಂಭಗೊಂಡಿದ್ದು ಭರ್ಜರಿ ದಾಖಲಾತಿ ನಡೆಯುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಮೊ: 9667755777, 7619493877 ನಂಬರನ್ನು ಸಂಪರ್ಕಿಸಬಹುದಾಗಿದೆ.